ನನಸಾಗಲಿದೆ ಕಲ್ಯಾಣ ಕನಾ೯ಟಕದ ಬಹುದಿನದ ಬೇಡಿಕೆ: ಶೀಘ್ರದಲ್ಲೇ ರಾತ್ರಿ ವಿಮಾನ ಸಂಚಾರ ಆರಂಭ!

ಹೊಸದಿಗಂತ ವರದಿ, ಕಲಬುರಗಿ:

ಕಲ್ಯಾಣ ಕರ್ನಾಟಕ ಜನರ ಬಹುದಿನದ ಬೇಡಿಕೆಯಾಗಿರುವ ಕಲಬುರಗಿ ರಾತ್ರಿ ವಿಮಾನ ನಿಲ್ದಾಣ ಸಂಚಾರ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಡಾ. ಮಹೇಶ ಚಿಲ್ಕಾ ಹಾಗೂ ದೆಹಲಿಯ ವಿಶೇಷ ವಿಮಾನದ ಪೈಲೆಟ್ ಅನೂಪ್ ಕಚ್ರೂ ತಿಳಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ ವಿಮಾನ ಸಂಚಾರಕ್ಕೆ ಈಗಾಗಲೇ ಪೂರ್ವಸಿದ್ದತೆ ಪೂರ್ಣ ಗೊಂಡಿದೆ. ದೆಹಲಿಯಿಂದ ವಿಶೇಷ ವಿಮಾನವನ್ನು ಹಾಗೂ ಸ್ಯಾಟಲೈಟ್ ಉಪಕರಣ ಹೊಂದಿರುವ ವಿಶೇಷ ವಿಮಾನವನ್ನು ತಂದು ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ವಿಮಾನ ಇಳಿಯಲು ಮತ್ತು ಹಾರಾಟ ನಡೆಸಲು ಬೇಕಾಗಿರುವ ಎಲ್ಲ ಸೌಕರ್ಯಗಳ ಪರೀಕ್ಷೆ ನಡೆದಿದೆ. ಈ ಕುರಿತ ವರದಿ ನಿರೀಕ್ಷಕರಿಗೆ ನೀಡಲಾಗಿದ್ದು ಇದನ್ನು ವಾರದಲ್ಲಿ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದರು.

ಪ್ರಾದಿಕಾರದಿಂದ ಅನುಮೋದನೆ ಸಿಕ್ಕ ತಕ್ಷಣ ತಿಂಗಳಯೊಳಗಾಗಿ ರಾತ್ರಿ ಪಾಳಯದ ವಿಮಾನ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ನಮ್ಮ ವಿಮಾನ ನಿಲ್ಲಾಣಕ್ಕೆ ಸಾಮಥ್ರ್ಯವನ್ನು ಹೊಂದಿದ್ದಕ್ಕಾಗಿ ನಾವು ರೋಮಾಂಚನಗೊಂಡಿದ್ದೇವೆ ಮತ್ತು ನಮಗೆ ವಿಶ್ವಾಸವಿದೆ ಎಂದರು.

ಎರಡು ವಿಶೇಷ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು ಐದು ವಿಮಾನಗಳ ಸಂಚಾರಕ್ಕೆ ಆಯಾ ವಿಮಾನ ಸಂಸ್ಥೆಗಳ ಮುಖ್ಯಸ್ಥರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ವೈದ್ಯಕೀಯ ತುರ್ತು ಚಿಕಿತ್ಸೆಗೆ ಈ ರಾತ್ರಿ ವಿಮಾನ ಸಹಾಯಕಾರಿಯಾಗಲಿದೆ. ಮೊದಲ ಹಂತವಾಗಿ ಎರಡು ವಿಮಾನಗಳು ಎರಡು ವಿಮಾನ ಸಂಚಾರ ಮಾಡಲಾಗುತ್ತಿದ್ದು, ಕಲಬುರಗಿಯಿಂದ ಬೆಂಗಳೂರು, ಕಲಬುರಗಿಯಿಂದ ತಿರುಪತಿಯಿಂದ ಮತ್ತು ಕಲಬುರಗಿಯಿಂದ ಇಂಡನ್ ( ದೆಹಲಿ) ಈ ಮಾರ್ಗಗಳಲ್ಲಿ ಸಂಚಾರ ಆರಂಭವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!