ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡಿದ ಭಟ್ರು-ಗೋಲ್ಡನ್ ಜೋಡಿ: ಗಾಳಿಪಟ 2 ಚಿತ್ರಕ್ಕೆ ಅಭಿಮಾನಿಗಳು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗೋಲ್ಡನ್ ಸ್ಟಾರ್ ಗಣೇಶ್‌ ಅಭಿನಯದ ಗಾಳಿಪಟ 2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸುದ್ದು ಮಾಡುತ್ತಿದೆ. 14 ವರ್ಷಗಳ ಹಿಂದೆ ತೆರೆಕಂಡಿದ್ದ ಗಾಳಿಪಟ ಚಿತ್ರದ ಮುಂದುವರಿದ ಭಾಗವೇ ಗಾಳಿಪಟ 2 ಚಿತ್ರವಾಗಿದ್ದು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ಮುಂಗಾರು ಮಳೆ ಚಿತ್ರದ ಮ್ಯಾಜಿಕ್​ ಜೋಡಿ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ .

ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾದ ಗಾಳಿಪಟ 2 ಸಿನಿಮಾ ತೆರೆಕಂಡ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇನ್ನು ಕರ್ನಾಟಕ ಅಲ್ಲದೇ ಮುಂಬೈ, ನವದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ 200 ಚಿತ್ರಮಂದಿರಗಳಲ್ಲಿ ಗಾಳಿಪಟ 2 ಹಾರಾಟ ಮಾಡಿದೆ.

ಫಸ್ಟ್ ಟೈಮ್ ಗಣೇಶ್ ಅಭಿನಯದ ಚಿತ್ರವೊಂದು ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಮಾ‌ ಪ್ರಿಯರ ಮೆಚ್ಚುಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ ಗಾಳಿಪಟ 2 ಪ್ರದರ್ಶನ ಕಂಡಿದೆ.

ಗಾಂಧಿನಗರದ ಸಿನಿಮಾ‌ ಪಂಡಿತರು ಪ್ರಕಾರ ಮೊದಲ ದಿನ 15ರಿಂದ 18 ಕೋಟಿ ಕಲೆಕ್ಷನ್‌ ಆಗಿದೆ ಅಂತಾ ಹೇಳಲಾಗುತ್ತಿದೆ. ಹಾಗೇ ಎರಡು ದಿನ‌ ಸರ್ಕಾರಿ ರಜೆ ಇರೋ ಕಾರಣ ಗಾಳಿಪಟ 2 ಸಿನಿಮಾಗೆ ದೊಡ್ಡ ಪ್ಲೆಸ್ ಪಾಯಿಂಟ್ ಆಗಿದೆ.

ಈ ಲೆಕ್ಕಾಚಾರದ ಮೇಲೆ ಗಾಳಿಪಟ 2 ಸಿನಿಮಾ ಈ ವಾರಕ್ಕೆ 30 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಗಣೇಶ್‌ ಸಿನಿಮಾ‌ ಕೆರಿಯರ್​ನಲ್ಲಿ ಗಾಳಿಪಟ 2 ಸಿನಿಮಾ‌ ಒಳ್ಳೆ ಗಳಿಕೆ ಎನ್ನಲಾಗುತ್ತಿದೆ. ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇದರ ಜೊತೆಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಈ ಮೂರು ಜನ‌ ಜೋಡಿಯಾಗಿ ಮಿಂಚಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!