ಸಿಲಿಕಾನ್ ಸಿಟಿಯಲ್ಲಿ ಕಂಬಳ ಗೌಜಿ: ವೇದಿಕೆಗೆ ಪುನೀತ್‌ ರಾಜಕುಮಾರ್ ಹೆಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ಕರಾವಳಿ ಕರ್ನಾಟಕದ ಜನಪ್ರಿಯ ‘ಕಂಬಳ’ಕ್ಕೆ ವೇದಿಕೆ ಸಿದ್ಧವಾಗಿದೆ.ನವೆಂಬರ್ 25 ಮತ್ತು 26 ರಂದು ಅರಮನೆ ಮೈದಾನದಲ್ಲಿ ಕಂಬಳ ನಡೆಯುತ್ತಿದೆ ‘ಕಂಬಳ’ದ ಜೊತೆಗೆ ಇಡೀ ಕರಾವಳಿ ಕರ್ನಾಟಕ “ಸಂಸ್ಕೃತಿ”ಯನ್ನು ರಾಜ್ಯದ ರಾಜಧಾನಿಯಲ್ಲಿ ಅನಾವರಣಗೊಳಿಸಲು ಸಂಘಟಕರು ನಿರ್ಧರಿಸಿದ್ದಾರೆ.

ತುಳುನಾಡಿನ ಕಂಬಳವನ್ನು ಬೆಂಗಳೂರಿಗೆ ತರುವುದು ನಮ್ಮ ಬದ್ಧತೆ ಮತ್ತು ಕನಸಾಗಿತ್ತು. ಕರಾವಳಿ ಕರ್ನಾಟಕದ ಸಂಸ್ಕೃತಿ, ಪಾಕಪದ್ಧತಿ ಮತ್ತು ಪರಂಪರೆಯನ್ನು ನಿಮಗಾಗಿ ತರುತ್ತಿದ್ದೇವೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ 139 ಜೋಡಿ ಎಮ್ಮೆಗಳು ಈಗಾಗಲೇ ಕರಾವಳಿ ಪ್ರದೇಶದಿಂದ ಬೆಂಗಳೂರಿಗೆ ತೆರಳಿವೆ.

ಮುಖ್ಯ ವೇದಿಕೆಗೆ ಎರಡು ವರ್ಷಗಳ ಹಿಂದೆ ನಿಧನರಾದ ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡಲಾಗಿದೆ. ಸಾಂಸ್ಕೃತಿಕ ವೇದಿಕೆಗೆ ಕೃಷ್ಣ ರಾಜ ಒಡೆಯರ್ ಹೆಸರು ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜೇತರಿಗೆ 16 ಗ್ರಾಂ ಚಿನ್ನ ಮತ್ತು ಒಂದು ಲಕ್ಷ ರೂ., ಮೊದಲ ರನ್ನರ್ ಅಪ್ ಗೆ ಎಂಟು ಗ್ರಾಂ ಚಿನ್ನ ಮತ್ತು ರೂ. 50,000 ಹಾಗೂ ಎರಡನೇ ರನ್ನರ್ ಅಪ್ ಗೆ ನಾಲ್ಕು ಗ್ರಾಂ ಚಿನ್ನ ಮತ್ತು 25,000 ರೂ. ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!