ಪ್ರಧಾನಿ ಮೋದಿಗೆ ಅವಮಾನ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಕಪ್ ಫೈನಲ್​ನಲ್ಲಿ (ICC World Cup 2023) ಭಾರತ (Indian Cricket Team) ಸೋಲನುಭವಿಸಲು ಪಂದ್ಯವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೋಗಿದ್ದೇ ಕಾರಣ. ಅವರೊಬ್ಬ ಅಪಶಕುನ ವ್ಯಕ್ತಿ (bad omen) ಎಂದು ಹೀಯಾಳಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರ ವಿರುದ್ಧ ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.

ಅಪಶಕುನ… ಅಪಶಕುನ.. ಅಪಶಕುನ.. ನಮ್ಮ ಹುಡುಗರು ವಿಶ್ವಕಪ್ ಗೆಲ್ಲುವ ಹಾದಿಯಲ್ಲಿದ್ದರು. ಆದರೆ ಅಪಶಕುನ ಅವರನ್ನು ಸೋಲುವಂತೆ ಮಾಡಿತು ಎಂಬುದು ಈ ದೇಶದ ಜನತೆಗೆ ಗೊತ್ತು ಎಂದು ರಾಹುಲ್ ಗಾಂಧಿ ಅವರು ರಾಜಸ್ಥಾನದ ಚುನಾವಣಾ ರ್ಯಾಲಿಯೊಂದರಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಸೋತ ಕುರಿತು, ಮೋದಿ ಅವರ ವಿರುದ್ಧ ವ್ಯಂಗ್ಯ ಮಾಡಿದ್ದರು.

ಜೊತೆಗೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಜೇಬುಗಳ್ಳ ಎಂದಿಗೂ ಒಬ್ಬನೇ ಬರುವುದಿಲ್ಲ. ಅವರು ಮೂರು ಜನರು ಇರ್ತಾರೆ. ಒಬ್ಬ ಎದುರಿಗೆ ಬರ್ತಾನೆ, ಮತ್ತೊಬ್ಬ ಹಿಂದಿನಿಂದ ಬರ್ತಾನೆ. ಇನ್ನೊಬ್ಬ ದೂರದಲ್ಲಿರುತ್ತಾನೆ.. ಪ್ರಧಾನಿ ಮೋದಿ ಅವರದ್ದು ನಿಮ್ಮ ಗಮನವನ್ನು ಬೇರೇಡೆಗೆ ಸೆಳೆಯುವುದಾಗಿದೆ. ಅವರು ಟಿವಿಯಲ್ಲಿ ಬರುತ್ತಾರೆ ಮತ್ತು ಹಿಂದೂ-ಮುಸ್ಲಿಮ್, ನೋಟು ಅಮಾನ್ಯೀಕರಣ, ಜಿಎಸ್‌ಟಿ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾರ್ವಜನಿಕರ ಗಮನವನ್ನು ಬೇರೇಡೆ ಸೆಳೆಯುತ್ತಾರೆ. ಈ ಮಧ್ಯೆ, ಅದಾನಿ ಹಿಂದಿನಿಂದ ಬಂದು ನಿಮ್ಮ ದುಡ್ಡು ಹೊಡ್ಕೊಂಡು ಹೋಗುತ್ತಾರೆ ಎಂದು ಟೀಕಿಸಿದ್ದರು.

ಚುನಾವಣಾ ಸಮಿತಿಗೆ ಪತ್ರ ಬರೆದಿರುವ ಭಾರತೀಯ ಜನತಾ ಪಾರ್ಟಿಯು, ಪ್ರಧಾನಿಯೊಬ್ಬರನ್ನು ರಾಹುಲ್ ಗಾಂಧಿ, ಜೇಬುಕಳ್ಳ ಮತ್ತು ಅಪಶಕುನಕ್ಕೆ ಹೋಲಿಸಿದ್ದಾರೆ. ಇದು ರಾಜಕೀಯ ಚರ್ಚೆಯ ಹಂತಗಳ ಕುಸಿತದ ಲಕ್ಷಣವಾಗಿದೆ ಎಂದು ಹೇಳಿದೆ.

ಯಾವುದೇ ವ್ಯಕ್ತಿಯನ್ನು ಜೇಬುಗಳ್ಳ ಎಂದು ಕರೆಯುವುದು ಕೆಟ್ಟ ನಿಂದನೆ ಮತ್ತು ವೈಯಕ್ತಿಕ ದಾಳಿ ಮಾತ್ರವಲ್ಲದೆ ಅವರ ಪ್ರತಿಷ್ಠೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರನ್ನು ದಾರಿ ತಪ್ಪಿಸುವ ಸ್ಪಷ್ಟ ಉದ್ದೇಶವಾಗಿದೆ ಎಂದು ಆಯೋಗಕ್ಕೆ ನೀಡಿರುವ ದೂರಿನಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!