ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ: ಕಣ್ಣೀರು ಹಾಕುತ್ತಾ ಕಹಿ ಘಟನೆ ನೆನಪಿಸಿಕೊಂಡ ನಟಿ ಕಂಗನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ .

ಬಾಲಿವುಡ್ ನಟಿ ಕಂಗನಾ ರಣಾವತ್ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.
ತನ್ನ ರಿಯಾಲಿಟಿ ಶೋ ‘ಲಾಕ್ ಅಪ್’ ನ ಇತ್ತೀಚಿನ ಸಂಚಿಕೆಗಳಲ್ಲಿ ಕಂಗನಾ ಇದುವರೆಗೆ ರಹಸ್ಯವಾಗಿದ್ದ ವಿಚಾರವನ್ನು ಬಹಿರಂಗಪಡಿಸಿದರು. ನಾನು ಸಹ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯ ಎದುರಿಸಿದ್ದೆ. ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಟಿ ತಮ್ಮ ನೋವು ಹೇಳಿಕೊಂಡರು.
ಮನ್ವರ್ ಫರೂಕಿ ಬಾಲ್ಯದಲ್ಲಿ ತಾವು ಎದುರಿಸಿದ ಲೈಂಗಿಕ ದೌರ್ಜನ್ಯದ ನೋವಿನ ಕಥೆ ಕೇಳಿದ ನಂತರ ಅವರು ತಮ್ಮ ಹಿಂದಿನ ನೋವು ನೆನಪಿಸಿಕೊಂಡರು.ನನಗೂ ಈ ತರಹದ ಕೆಟ್ಟ ಅನುಭವಾಗಿದೆ ಎಂದು ತಮ್ಮ ಚಿಕ್ಕ ವಯಸ್ಸಿನಲ್ಲಾದ ಕಹಿ ಘಟನೆಯನ್ನು ನೆನೆಪು ಮಾಡಿಕೊಂಡು ಕಣ್ಣೀರು ಹಾಕಿದ ಘಟನೆ ನಡೆಯಿತು.
ತನ್ನ ಊರಿನಲ್ಲಿ ಒಬ್ಬ ಹುಡುಗನಿಂದ ಅನುಚಿತವಾಗಿ ಸ್ಪರ್ಶಿಸಲ್ಪಟ್ಟಿದ್ದನ್ನು ನೆನಪಿಸಿಕೊಳ್ಳುತ್ತಾ, ಪ್ರತಿ ವರ್ಷ ಅನೇಕ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಸಿಲುಕುತ್ತಾರೆ ಆದರೆ ನಾವು ಸಾರ್ವಜನಿಕ ವೇದಿಕೆಗಳಲ್ಲಿ ಅದರ ಬಗ್ಗೆ ಮಾತನಾಡುವುದನ್ನು ತಪ್ಪಿಸುತ್ತೇವೆ ಎಂದರು.
ನಾನು ಚಿಕ್ಕವಳಾಗಿದ್ದೆ ಮತ್ತು ನಮ್ಮ ಊರಿನ ಒಬ್ಬ ಹುಡುಗ ನನ್ನನ್ನು ಅನುಚಿತವಾಗಿ ಸ್ಪರ್ಶಿಸಿಸಿದ್ದಲ್ಲದೇ ನನ್ನ ಬಟ್ಟೆಗಳನ್ನು ಬಿಚ್ಚಲು ಕೇಳುತ್ತಿದ್ದ ಎಂದು ಹೇಳುತ್ತಲೇ ಕಣ್ಣೀರಾದ ನಟಿ ಕಂಗನಾ, ಆ ಸಮಯದಲ್ಲಿ, ಇದರ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ, ನಿಮ್ಮ ಕುಟುಂಬವು ಎಷ್ಟೇ ರಕ್ಷಣಾತ್ಮಕವಾಗಿದ್ದರೂ, ಎಲ್ಲಾ ಮಕ್ಕಳು ಇದನ್ನು ಅನುಭವಿಸುತ್ತಾರೆ ಎಂದರು.
ಮನ್ವರ್ ಫರೂಕಿ ಸತ್ಯವನ್ನು ಹಂಚಿಕೊಂಡಂತೆ ಇತರರು ಸಹ ಮುಂದೆ ಬಂದು ತಮಗಾದ ನೋವು ಹೇಳಿಕೊಳ್ಳಬಹುದು ಎಂದು ಶೋನಲ್ಲೇ ತಿಳಿ ಹೇಳಿದರು.ಇದನ್ನು ಯಾರೊಂದಿಗೂ ಹಂಚಿಕೊಂಡಿದ್ದಲ್ಲ ಎಂದು ಮನ್ವರ್ ಹೇಳುತ್ತಿದ್ದಂತೆ ನಟಿಯು ತನ್ನ ನೋವಿನ ಕಥೆ ಹಂಚಿಕೊಂಡು ಅವರಿಗೆ ಸಾಂತ್ವನ ಹೇಳಿದರು.
ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಅರಿವು ಮೂಡಿಸಬೇಕು. ಇದು ನಮ್ಮ ಸಮಾಜದ ದೊಡ್ಡ ಸಮಸ್ಯೆ ಎಂದು ದೌರ್ಜನ್ಯದ ಬಗ್ಗೆ ಪಾಠ ಕೊಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!