ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ನಟಿ-ರಾಜಕಾರಣಿ ಕಂಗನಾ ರನೌತ್ ಅವರು ತಮ್ಮ ಹೊಸ ‘ದಿ ಮೌಂಟೇನ್ ಸ್ಟೋರಿ ಕೆಫೆ’ ಯನ್ನು ತೆರೆದಿದ್ದಾರೆ.
ಮನಾಲಿಯ ಬಿಜೆಪಿ ಸಂಸದೆಯಾದ ಕಂಗನಾ ರನೌತ್ ಅವರು, ತಮ್ಮ ಬಾಲ್ಯದ ಕನಸು ಎಂದು ‘ದಿ ಮೌಂಟೇನ್ ಸ್ಟೋರಿ ಕೆಫೆ’ ಎಂಬ ಸಸ್ಯಹಾರಿ ಹೊಟೇಲ್ ಅನ್ನು ತೆರೆದಿದ್ದಾರೆ. ಬಿಜೆಪಿ ನಾಯಕಿಯ ಈ ಬಾಲ್ಯದ ಕನಸು ನನಸಾಗಿದ್ದಕ್ಕೆ ಜಾಲತಾಣದಲ್ಲಿ ಅಭಿನಂದನೆಗಳ ಮಹಾಪೂರವೇ ಬಂದಿದೆ. ಆದಾಗ್ಯೂ, ಆ ಒಂದು ಹರ್ಷೋದ್ಗಾರವು ಆಶ್ಚರ್ಯಕರವಾಗಿತ್ತು. ಇದರಿಂದ ಜಾಲತಾಣಿಗರು ಆ ಖಾತೆ ಏನಾದರೂ ಹ್ಯಾಕ್ ಆಗಿದ್ದೇಯಾ ಎಂದು ಜನರು ತಲೆ ಕೆಳಗೆ ಮಾಡಿಕೊಂಡಿದ್ದಾರೆ.
ಹೌದು, ಬಾಲಿವುಡ್ ನಟಿ ಕಂಗನಾ ರನೌತ್ ಅವರ ಹೊಸ ಹೊಟೇಲ್ ಪ್ರಾರಂಭವಾದ ಕಾರಣದಿಂದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು ಶುಭಾಶಯ ತಿಳಿಸಿದೆ. ಇದರೊಂದಿಗೆ ನೆಟ್ಟಿಗರು ಸಹ ಕಾಂಗ್ರೆಸ್ ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪೋಸ್ಟ್ನಲ್ಲಿ ಏನಿತ್ತು?
‘ಆತ್ಮೀಯ @KanganaTeam, ನಿಮ್ಮ ಹೊಸ ‘ಶುದ್ಧ ಸಸ್ಯಾಹಾರಿ’ ರೆಸ್ಟೋರೆಂಟ್ ಬಗ್ಗೆ ತಿಳಿದು ನಮಗೆ ಸಂತೋಷವಾಯಿತು. ಪ್ರವಾಸಿಗರಿಗೆ ನೀವು ಅದ್ಭುತವಾದ ಹಿಮಾಚಲಿ ಸಸ್ಯಾಹಾರಿ ಭಕ್ಷ್ಯಗಳನ್ನು ಬಡಿಸುತ್ತೀರಿ ಎಂದು ಭಾವಿಸುತ್ತೇವೆ. ಈ ಸಾಹಸಕ್ಕೆ ಎಲ್ಲಾ ಯಶಸ್ಸನ್ನು ಹಾರೈಸುತ್ತೇನೆ’ ಎಂದು ಪೋಸ್ಟ್ ಮಾಡಿದೆ.
ನೆಟ್ಟಿಗರು ಏನಂದರು?
ಬಿಜೆಪಿ ಸಂಸದೆ ಹಾಗೂ ಕಾಂಗ್ರೆಸ್ ಪಕ್ಷಗಳು ಯಾವಾಗಾಲೂ ರಾಜಕೀಯ ಪ್ರೇರಿತ ವಾಕ್ಸ್ಮರಕ್ಕೆ ಸುದ್ದಿಯಲ್ಲಿರುತ್ತವೆ. ಆದರೆ ಕಾಂಗ್ರೆಸ್ ಪಕ್ಷದ ಈ ಪೋಸ್ಟ್ ಸದ್ಯ ರಾಜಕೀಯ ವಲಯದಲ್ಲಿ ಆಶ್ಚರ್ಯವುಂಟು ಮಾಡಿದೆ.
ಇನ್ನು ಕಾಂಗ್ರೆಸ್ ಪಕ್ಷದ ಪೋಸ್ಟ್ಗೆ ಪ್ರತಿಕ್ರಿಸಿರುವ ನೆಟ್ಟಿಗರು, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಮತ್ತೊಬ್ಬರು ಪ್ರತಿಕ್ರಿಯಿಸಿ, ಈ ಖಾತೆಯನ್ನು ಪ್ರೌಢಶಾಲೆಯ ವಿದ್ಯಾರ್ಥಿಯೊಬ್ಬರು ಊಟದ ಸಮಯದಲ್ಲಿ ಖಾತೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಬ್ಬರು, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಅಡುಗೆ ಮಾಡುತ್ತಿರುವ ವಿಡಿಯೋವನ್ನು ಲಗತ್ತಿಸಿ ನಿಮ್ಮ ಗುರುವನ್ನು ಮರೆಯ ಬೇಡಿ ಎಂದು ಬರೆದಿದ್ದಾರೆ.