Sunday, February 5, 2023

Latest Posts

BOLLYWOOD| ಸಿನಿಮಾ ಚಿತ್ರೀಕರಣಕ್ಕೆ ಏಕಾಏಕಿ ಲೋಕಸಭೆಯ ಸೆಕ್ರೆಟರಿಯೇಟ್‌ನಲ್ಲಿ ಅನುಮತಿ ಕೇಳಿದ ಕಂಗನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಫೈರ್‌ಬ್ರಾಂಡ್ ಕಂಗನಾ ರಣಾವತ್ ಯಾವಾಗಲೂ ತಮ್ಮ ಸಿನಿಮಾಗಳ ಮೂಲಕ ಅಥವಾ ಅವರ ಕಾಮೆಂಟ್‌ಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ವಿವಾದಗಳಲ್ಲೇ ಉಳಿದುಕೊಂಡಿರುವ ಈ ಬಾಲಿವುಡ್ ನಟಿ ದೇಶ ಮತ್ತು ಧರ್ಮಕ್ಕಾಗಿ ಏನೇ ಆದರೂ ಹೋರಾಡುತ್ತಾರೆ. ಇತ್ತೀಚೆಗೆ ಕಂಗನಾ ಹೆಚ್ಚಾಗಿ ಕಂಟೆಂಟ್ ಓರಿಯೆಂಟೆಡ್ ಮತ್ತು ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಸದ್ಯ ‘ಎಮರ್ಜೆನ್ಸಿ’ ಎಂಬ ಸಿನಿಮಾ ತಯಾರಾಗುತ್ತಿದೆ. ಕಂಗನಾನೇ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ. ಈ ಚಿತ್ರದ ಶೂಟಿಂಗ್ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯಲಿದೆ. ಆದರೆ, ಈ ಸಿನಿಮಾದ ಚಿತ್ರೀಕರಣಕ್ಕಾಗಿ ಲೋಕಸಭೆಯ ಸೆಕ್ರೆಟರಿಯೇಟ್ ಎದುರು ಚಿತ್ರೀಕರಣ ನಡೆಸಲಿದ್ದು, ಅನುಮತಿ ನೀಡುವಂತೆ ಲೋಕಸಭೆ ಸಚಿವಾಲಯದ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರಂತೆ.

ಈ ವಿಚಾರದಲ್ಲಿ ಮತ್ತೊಮ್ಮೆ ಇದೀಗ ಸುದ್ದಿಯಲ್ಲಿದ್ದಾರೆ. ವಾಸ್ತವವಾಗಿ ಲೋಕಸಭಾ ಸಚಿವಾಲಯ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿ ವ್ಯಕ್ತಿಗಳ ವೀಡಿಯೊ ಮತ್ತು ಕ್ಯಾಮೆರಾಗಳನ್ನು ಅನುಮತಿಸಲಾಗುವುದಿಲ್ಲ. ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‌ಗಳಿಗೆ ಮಾತ್ರ ಅವಕಾಶವಿದೆ. ಕಂಗನಾ ಮನವಿಗೆ ಸಮ್ಮತಿಸಿ ನಿಯಮ ಉಲ್ಲಂಘಿಸಿ ಲೋಕಸಭೆ ಸೆಕ್ರೆಟರಿಯೇಟ್ ಎದುರು ಶೂಟಿಂಗ್ ಗೆ ಅವಕಾಶ ನೀಡುತ್ತಾರಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಆದರೆ ಅನುಮತಿ ನೀಡುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಉನ್ನತ ಅಧಿಕಾರಿಗಳು. ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!