ಮಂಡಿಯಲ್ಲಿ ಅದ್ದೂರಿ ರೋಡ್ ಶೋ ನಡೆಸಿ ಪ್ರಚಾರ ಆರಂಭಿಸಿದ ಕಂಗನಾ ರಣಾವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಬಾಲಿವುಡ್ ನಟಿ, ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಶುಕ್ರವಾರ ರೋಡ್ ಶೋ ಮೂಲಕ ತಮ್ಮ ಪ್ರಚಾರವನ್ನು ಪ್ರಾರಂಭಿಸಿದರು.

ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಬಿಜೆಪಿ ಕಾರ್ಯಕರ್ತರು ರಣಾವತ್ ಮೇಲೆ ಪುಷ್ಪವೃಷ್ಟಿ ಹಾಗೂ ಭರ್ಜರಿ ಡ್ಯಾನ್ಸ್ ಮೂಲಕ ಆತ್ಮೀಯ ಸ್ವಾಗತ ಕೋರಿದರು.

ತವರಿನಲ್ಲಿ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ಕಂಗನಾ,’ಅಭಿವೃದ್ಧಿಯೇ ಬಿಜೆಪಿಯ ಮುಖ್ಯ ಅಜೆಂಡಾವಾಗಿದ್ದು, ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಚುನಾವಣೆ ಗೆಲ್ಲಲು ನಾವು ಯಾವುದೇ ಪ್ರಯತ್ನ ಮಾಡಲ್ಲ, ‘ಮಂಡಿ ಜನರು ತಮ್ಮ ಮನದಾಳದಲ್ಲಿರುವುದನ್ನು ಹೇಳಲಿದ್ದಾರೆ’ ಎಂದರು.

ಮಾರ್ಚ್ 24 ರಂದು ಬಿಜೆಪಿ ಟಿಕೆಟ್ ಪಡೆದ ನಂತರ ರಣಾವತ್, ತಮ್ಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಿಜೆಪಿಯು ತನಗೆ ಟಿಕೆಟ್ ನೀಡಿದರೆ ಮಂಡಿಯಿಂದ ಸ್ಪರ್ಧಿಸಲು ತಾನು ಮುಕ್ತ ಎಂದು 2022 ರ ಅಕ್ಟೋಬರ್‌ನಲ್ಲಿ ಅವರು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!