ಜೂ. 19 ರಂದು ಹುಬ್ಬಳ್ಳಿಯಲ್ಲಿ ‘ಕಂಕಣ 2022’ ಪುಸ್ತಕ ಬಿಡುಗಡೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ನಗರದ ಬಣಗಾರ ಸಮಾಜ ಹುಬ್ಬಳ್ಳಿ ಧಾರವಾಡ ವತಿಯಿಂದ ಜೂ. ೧೯ ರಂದು ಬೆಳಿಗ್ಗೆ ೧೦.೩೦ ಕ್ಕೆ ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ‌ ಸಂಸ್ಥೆ ಸಭಾ ಭಾವನದಲ್ಲಿ ವಧು ವರರ ಮಾಹಿತಿ ಪುಸ್ತಕ ‘ಕಂಕಣ ೨೦೨೨’ ಬಿಡುಗಡೆ ಮತ್ತು ಎಸ್ಸೆಸ್ಸೆಲ್ಸಿ ಹಾಗೂ ಉನ್ನತ ವ್ಯಾಸಂಗದ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬಣಗಾರ ಸಮಾಜ ಅಧ್ಯಕ್ಷ ಅನಿಲ ಕವಿಶೆಟ್ಟಿ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಣಗಾರ ಸಮಾಜ ವತಿಯಿಂದ ರಾಷ್ಟ್ರ ಮಟ್ಟದ ೨೫ ನೇ ಹಾಗೂ ೯ ನೇ ವಧು ವರರ ಸಮ್ಮೇಳನ ಯಶಸ್ವಿಯಾಗಿ ಮೇ ೫ ರಂದು ನೆರೆವೇರಿಸಲಾಗಿದೆ. ಅದರ ಅಂಗವಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ. ೨೫ ಕ್ಕೂ ಹೆಚ್ಚು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಅತಿಥಿಗಳಾಗಿ ಹುಬ್ಬಳ್ಳಿ ರಿಜನಲ್ ಪ್ರಾವಿಡೆಂಟ್ ಫಂಡ್ ನ ಕಮಿಷನರ್ ಟಿ.ಆರ್. ವೀರೇಶ, ಶಿವಮೊಗ್ಗ ಕೈಗಾರಿಕೋದ್ಯಮಿ ವಿರುಪಾಕ್ಷಪ್ಪ ಜವಳಿ, ಅಖಿಲ ಭಾರತ ಬಣಗಾರ ಸಮಾಜದ ಅಧ್ಯಕ್ಷ ಬಾಳಾಸಾಹೇಬ್ ದೇವನಾಳ, ಗೌರವಾಧ್ಯಕ್ಷ ಸುರೇಶ ಚೆನ್ನಿ,  ಬಣಗಾರ ಸಮಾಜದ ಅಧ್ಯಕ್ಷ ಅನಿಲ ಕವಿಶೆಟ್ಟಿ ಭಾಗವಹಿಸುವರು ಎಂದು ತಿಳಿಸಿದರು.

ಬಣಗಾರ ಸಮಾಜದ ಸಂಘಟನಾ ಕಾರ್ಯದರ್ಶಿ ರಾಜಶೇಖರ ಬಳ್ಳಾರಿ ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!