ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಆಪ್ತರಾಗಿದ್ದ ಹಾಗೂ ಸ್ಯಾಂಡಲ್ ವುಡ್ ನಿರ್ದೇಶಕ ವಿ.ಆರ್. ಭಾಸ್ಕರ್ ಇಂದು ಮುಂಜಾನೆ 3 ಗಂಟೆಗೆ ವಿಧಿವಶರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಇಂದು ಮೈಸೂರಿನ ಚಾಮುಂಡಿ ಬೆಟ್ಟದ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.
ಡಾ.ವಿಷ್ಣುವರ್ಧನ್ ಆಪ್ತರಾಗಿದ್ದ ಅವರು ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗಾಡ್ ಫಾದರ್, ಆಪ್ರಮಿತ್ರ, ಆಪ್ತರಕ್ಷಕ, ಹೃದಯವಂತ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಏಕದಂತ, ಸೇರಿದಂತೆ ವಿಷ್ಣುವರ್ಧನ್ ಅವರ ಹಲವು ಸಿನಿಮಾಗಳಿಗೆ ಇವರು ಸಂಭಾಷಣೆ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ಮನೆಮನೆ ರಾಮಾಯಣ, ಸಕಲಕಲಾವಲ್ಲಭ, ಹೃದಯಾಂಜಲಿ, ಪಂಜಾಬಿ ಹೌಸ್, ಮುಂತಾದ ಸಿನಿಮಾಗಳನ್ನು ವಿ.ಆರ್.ಭಾಸ್ಕರ್ ನಿರ್ದೇಶಿಸಿದ್ದಾರೆ.