ಕನ್ನಡ ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ | ರೂಪೇಶ್‌ ರಾಜಣ್ಣ, ದೀಪಿಕಾ ಔಟ್: ಯಾರು ಆಗ್ತಾರೆ ವಿನ್ನರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್‌ ಬಾಸ್‌ ಸೀಸನ್‌ 9ರ ಗ್ರ್ಯಾಂಡ್‌ ಫಿನಾಲೆ ನಡೆಯುತ್ತಿದ್ದು, ಈಗಾಗಲೇ ಟಾಪ್ ೫ ರಲ್ಲಿ ದಿವ್ಯಾ ಔಟಾಗಿದ್ದು, ಇದೀಗ ರೂಪೇಶ್‌ ರಾಜಣ್ಣ ಮತ್ತು ದೀಪಿಕಾ ದಾಸ್ ಕೂಡಮನೆಯಿಂದ ಹೊರ ನಡೆದಿದ್ದಾರೆ .

ಈ ಮೂಲಕ ಫೈನಲ್ ಹಂತದಲ್ಲಿ ರೊಪೇಶ್ ಶೆಟ್ಟಿ, ಮತ್ತು ರಾಕೇಶ್ ಅಡಿಗ ಇದ್ದಾರೆ.

ಕನ್ನಡ ಪರ ಹೋರಾಟಗಾರ ಗಮನ ಸೆಳೆದಿದ್ದ ರೂಪೇಶ್ ರಾಜಣ್ಣ, ನವೀನರ ಪೈಕಿ ಒಬ್ಬರಾಗಿ ಮನೆಗೆ ಕಾಲಿಟ್ಟಿದ್ದರು. ಇತರೆ ಸ್ಪರ್ಧಿಗಳಿಗೂ ಪೈಪೋಟಿ ಕೊಟ್ಟು ಟಾಪ್ 5 ಫೈನಲಿಸ್ಟ್‌ಗಳ ಪೈಕಿ ಇವರು ಒಬ್ಬರಾಗಿದ್ದರು. ಈಗ ರೂಪೇಶ್ ರಾಜಣ್ಣ ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ ಬಾಸ್‌ನಿಂದ ಹೊರಬಂದಿದ್ದಾರೆ.

ಇದಾದ ಬಳಿಕ ‘ನಾಗಿಣಿ’ ಧಾರಾವಾಹಿ ಮೂಲಕ ಮನೆಮಾತಾಗಿದ್ದರು ದೀಪಿಕಾ ದಾಸ್‌ ಫಿನಾಲೆಯ ಸ್ಪರ್ಧಿಯಾಗಿದ್ದರು. ಕಳೆದ ಸೀಸನ್‌ನಲ್ಲೂ ಗೆಲುವು ಕಾಣದ ಬೆನ್ನಲ್ಲೇ ಬಿಗ್ ಬಾಸ್ ಸೀಸನ್ 9ಕ್ಕೂ ಕಾಲಿಟ್ಟಿದ್ದರು. ಈಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಮೂರನೇ ರನ್ನರ್ ಅಪ್ ಆಗಿದ್ದಾರೆ.

ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ನಡುವೆ ಗೆಲುವಿನ ಪೈಪೋಟಿ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!