ಪ್ರಿನ್ಸ್‌ ತಂದೆ ಪಾತ್ರದಲ್ಲಿ ಮಿಂಚಲಿದ್ದಾರಾ ಕ್ರೇಜಿಸ್ಟಾರ್‌..? ಟಾಲಿವುಡ್‌ನಲ್ಲಿ ಹೀಗೊಂದು ಟಾಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಇತ್ತೀಚಿನ ಚಿತ್ರ ‘ಸರ್ಕಾರು ವಾರಿ ಪಾಟ’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಮಹೇಶ್ ಅಭಿನಯಕ್ಕೆ ಪ್ರೇಕ್ಷಕರು ತುಂಬಾ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಮಹೇಶ್ ತಮ್ಮ ಮುಂದಿನ ಚಿತ್ರಗಳಿಗೆ ರೆಡಿಯಾಗುತ್ತಿದ್ದಾರೆ.

ಈಗಾಗಲೇ ತಮ್ಮ ಮುಂದಿನ ಸಿನಿಮಾವನ್ನು ತ್ರಿವಿಕ್ರಮ್ ಅವರ ನಿರ್ದೇಶನದಲ್ಲಿ ಮಾಡಲು ಮುಂದಾಗಿರುವ ಮಹೇಶ್, ಈ ಸಿನಿಮಾವನ್ನು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತೆ ಚಿತ್ರಿಸಲು ನೋಡುತ್ತಿದ್ದಾರೆ. ಈ ಕ್ರಮದಲ್ಲಿ ಸಿನಿಮಾದಲ್ಲಿ ಮಾಸ್ ಅಂಶಗಳ ಜೊತೆಗೆ ಸಾಕಷ್ಟು ಫ್ಯಾಮಿಲಿ ಎಮೋಷನ್ಸ್ ಇರಲಿದೆಯಂತೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ಮಾಡಲಿದ್ದಾರಂತೆ. ಆದರೆ ಇದೀಗ ಈ ಪಾತ್ರಕ್ಕೆ ಮತ್ತೊಬ್ಬ ನಟನ ಹೆಸರು ಕೇಳಿಬರುತ್ತಿದೆ.

ಮಹೇಶ್ ಬಾಬು ತಂದೆಯಾಗಿ ಕನ್ನಡದ ಸ್ಟಾರ್ ಹೀರೋ ಎ.ರವಿಚಂದ್ರನ್ ನಟಿಸಲಿದ್ದಾರಂತೆ. ಈ ಚಿತ್ರದಲ್ಲಿ ಮಹೇಶ್ ಅವರ ತಂದೆಯ ಪಾತ್ರ ಬಹುಮುಖ್ಯವಾಗಿರಲಿದೆ ಎನ್ನುತ್ತವೆ ಚಿತ್ರ ಮೂಲಗಳು. ಹಾಗಾಗಿಯೇ ದಕ್ಷಿಣ ಭಾಗದ ಚಿತ್ರರಂಗದಲ್ಲಿ ಪರಿಚಯವಿರುವ ನಾಯಕನಾದರೆ ಇಲ್ಲಿನ ಪ್ರೇಕ್ಷಕರಿಗೆ ಪಾತ್ರ ತುಂಬಾ ಕನೆಕ್ಟ್ ಆಗಲಿದೆ ಎಂಬುದು ಚಿತ್ರತಂಡದ ಆಶಯ.ಹಾಗಾಗಿ ಮಹೇಶ್ ತಂದೆಯಾಗಿ ಕ್ರೇಜಿಸ್ಟಾರ್ ಪರ್ಫೆಕ್ಟ್ ಆಗಲಿದ್ದಾರೆ. ಅಲ್ಲದೆ, ತೆಲುಗು ತೆರೆಗೆ ರವಿಚಂದ್ರನ್‌ ಹೊಸ ಪರಿಚಯವಾಗಲಿದೆ ಎಂದು ತ್ರಿವಿಕ್ರಮ್ ಭಾವಿಸಿದ್ದಾರೆ. ಅಂದಾಲ ರಾಕ್ಷಸಿ ಪೂಜಾ ಹೆಗಡೆ ಈ ಸಿನಿಮಾದಲ್ಲಿ ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಜುಲೈನಿಂದ ಚಿತ್ರದ ರೆಗ್ಯುಲರ್ ಶೂಟಿಂಗ್ ಶುರು ಮಾಡುವ ನಿರೀಕ್ಷೆ ಚಿತ್ರತಂಡದ್ದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!