Sunday, August 14, 2022

Latest Posts

ಶೂಟಿಂಗ್‌ ಸೆಟ್‌ನಲ್ಲಿ ಕಿರುತೆರೆ ನಟ ಚಂದನ್‌ ಮೇಲೆ ಹಲ್ಲೆ: ಕ್ಷಮೆ ಕೇಳಿದ್ರೂ ಬಿಡದೆ ಬೈಗುಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡದ ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಸೀರಯಲ್‌ ಖ್ಯಾತಿಯ ಚಂದನ್‌ ಮೇಲೆ ತೆಲುಗು ಧಾರಾವಾಹಿ ಸೆಟ್‌ನಲ್ಲಿ ಹಲ್ಲೆ ನಡೆದಿದೆ. ಕನ್ನಡ, ತೆಲಿಗು ಎರಡೂ ಭಾಷೆಗಳಲ್ಲೂ ನಟಿಸಿ ಹೆಸರು ಮಾಡಿರುವ ಚಂದನ್‌ ಪ್ರಸ್ತುತ ಶ್ರೀಮತಿ ಶ್ರೀನಿವಾಸ್‌ ಎಂಬ ತೆಲುಗು ಸೀರಿಯಲ್‌ನಲ್ಲಿ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಈ ಧಾರಾವಾಹಿಯ ತಂತ್ರಜ್ಞಾನ ತಂಡ ಹಾಗೂ ಚಂದನ್‌ ನಡುವೆ ವಾಗ್ವಾದಕ್ಕಿಳಿದು ಇದ್ದಕ್ಕಿದ್ದಂತೆ ಹಲ್ಲೆ ಮಾಡಿದ್ದಾರೆ.

ಸೆಟ್‌ನಲ್ಲಿ ಆಗಿದ್ದೇನು?

ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ ಜೊತೆಗೆ ಸರಿಯಾಗಿ ನಿದ್ದೆಯಿಲ್ಲ. ಧಾರಾವಾಹಿ ಶೂಟಿಂಗ್‌ ಬೇರೆ ಇದೆಲ್ಲದರ ಚಿಂತೆಯಲ್ಲಿದ್ದ ಚಂದನ್‌ ಡೈರೆಕ್ಟರ್‌ ಅವರಿಗೆ ಮಾಹಿತಿ ನೀಡಿಯೇ ಚಂದನ್ ನಿದ್ದೆ ಮಾಡುತ್ತಿದ್ದರಂತೆ. ಆಗ ಸೆಟ್ ಅಸಿಸ್ಟೆಂಟ್‌ ಏಕವಚನದಲ್ಲಿ ಜೋರಾಗಿ ʻಏಯ್‌ ಎಬ್ಬಿಸೋ ಅವನನ್ನುʼ ಎಂದು ಕೂಗಾಡಿದ್ದಾನೆ. ಇದರಿಂದ ಕೋಪಗೊಂಡ ಚಂದನ್‌ ಮತ್ತು ಆತನ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತದವರೆಗೂ ಹೋಗಿ, ಚಂದನ್‌ ಅಸಿಸ್ಟೆಂಟ್‌ ಅನ್ನು ತಳ್ಳಿದರು ಎಂದಿದ್ದಾರೆ. ಕುಪಿತಗೊಂಡ ಅಸಿಸ್ಟೆಂಟ್‌, ಡೈರೆಕ್ಟರ್‌ ಬಳಿ ತೆರಳಿ ಚಂದನ್‌ ನನ್ನ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದನೆಂದು ದೂರು ನೀಡಿದ್ದಾರೆ.

ಏಕಾಏಕಿ ಸೀರಿಯಲ್‌ ತಂಡದವರೆಲ್ಲರೂ ಒಟ್ಟಾಗಿ ಬಂದು ಚಂದನ್‌ ಮೇಲೆ ಮುಗಿಬಿದ್ದಿದ್ದಾರೆ. ಹೀರೋ ಆದರೆ ನಿನಗೆ ಎರಡು ಕೊಂಬು ಇದ್ಯಾ, ನಮ್ಮವನ ಮೇಲೆ ಹೆಂಗೆ ಕೈ ಮಾಡಿದೆ ಎಂದು ಗಲಾಟೆ ಶುರು ಮಾಡಿದ್ದಾರೆ. ಈ ನಡುವೆ ಅಲ್ಲಿದ್ದ ವ್ಯಕ್ತಿಯೊಬ್ಬ ಚಂದನ್‌ ಕೆನ್ನೆಗೆ ಹೊಡೆದಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss