Wednesday, June 7, 2023

Latest Posts

ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದುಕೊಟ್ಟ ಕನ್ನಡತಿ ದಿವ್ಯಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಜರಬೈಜಾನ್‌ನ ಬಾಕುನಲ್ಲಿ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ನಡೆಯುತ್ತಿದ್ದು, ಭಾರತಕ್ಕೆ ಮೊದಲ ಚಿನ್ನದ ಪದಕ ದೊರಕಿದೆ. 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದ ಫೈನಲ್ಸ್‌ನಲ್ಲಿ ಕನ್ನಡತಿ ದಿವ್ಯಾ ಹಾಗೂ ಸರಬ್‌ಜೋತ್ ಸಿಂಗ್ ಜೋಡಿ ಮೊದಲ ಸ್ಥಾನ ಪಡೆದಿದೆ.

Manu Bhaker & Sarabjot Singh clinch Mixed Team Pistol title at National  Shooting Championshipಸರ್ಬಿಯಾದ ದಮಿರ್ ಹಾಗೂ ಜೊರಾನಾ ವಿರುದ್ಧದ ಫೈನಲ್ ಪಂದ್ಯದಲ್ಲಿ 16-14 ಅಂತರದ ರೋಚಕ ಗೆಲುವು ಸಾಧಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ನಿವಾಸಿ ದಿವ್ಯಾ ಚಿನ್ನಕ್ಕೆ ಮುಟ್ಟಿದ್ದು, ದೇಶವೇ ಹೆಮ್ಮೆಪಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!