Wednesday, March 29, 2023

Latest Posts

ಸುಖಾಂತ್ಯ ಕಂಡ ʼಕನ್ನಡತಿʼ ಧಾರವಾಹಿ : ಕೊನೆಯ ಸಂಚಿಕೆ ಇಂದು ಪ್ರಸಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕನ್ನಡದ ಕಂಪು ಬೀರುವುದರ ಜೊತೆಗೆ ಮನೆ ಮಾತಾಗಿದ್ದ ಧಾರವಾಹಿ ʼಕನ್ನಡತಿʼ ಇದೀಗ ಮುಕ್ತಾಯ ಹಂತಕ್ಕೆ ತಲುಪಿದೆ. ವೀಕ್ಷಕರಿಗೆ ಒಂದೆಡೆ ನಿರಾಸೆ ಮತ್ತೊಂದೆಡೆ ಸಂತಸದ ವಾತಾವರಣದೊಂದಿಗೆ ಧಾರವಾಹಿ ಮುಕ್ತಾಯಗೊಳ್ಳಲಿದೆ ಎಂಬ ಸಮಾಧಾನವಿದೆ.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಕನ್ನಡತಿʼ ಧಾರವಾಹಿ ತನ್ನ 800 ಸಂಚಿಕೆಗಳೊಂದಿಗೆ ಇಂದು ಮುಕ್ತಾಯಗೊಳ್ಳಲಿದೆ.

ಧಾರವಾಹಿಯಲ್ಲಿ ಪ್ರಮುಖ ಪಾತ್ರಗಳು ಸೇರಿದಂತೆ ಎಲ್ಲಾ ಪಾತ್ರಗಳು ಕೂಡ ಜನರ ಮೆಚ್ಚುಗೆಯನ್ನು ಪಡೆದಿವೆ. ಅಮ್ಮಮ್ಮನ ಪ್ರೀತಿ ಜವಾಬ್ದಾರಿ, ನಾಯಕ ಮತ್ತು ನಾಯಕಿಯ ಪ್ರೇಮಕಥೆ, ಎಲ್ಲಾ ಕಥೆಗಳಲ್ಲೂ ಕಾಣಸಿಗುವ ಖಳನಾಯಕ/ಖಳನಾಯಕಿಯ ಪಾತ್ರಗಳೊಂದಿಗೆ ಧಾರವಾಹಿಯನ್ನು ಸುಂದರವಾಗಿ ಕಟ್ಟಿಕೊಡಲಾಗಿತ್ತು. ಒಟ್ಟಾರೆ ಕನ್ನಡ ಕಂಪನ್ನು ಬೀರಿದ್ದ ಧಾರವಾಹಿಯ ಕೊನೆಯ ಸಂಚಿಕೆ ಇಂದು ಪ್ರಸಾರಗೊಳ್ಳಲಿದ್ದು, ಅಭಿಮಾನಿಗಳು ಸಂತಸದಿಂದ ವೀಕ್ಷಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!