ನಾಯಕತ್ವ ತೊರೆಯಲಿದ್ದಾರಾ ಕನ್ನಡಿಗ ಕೆ.ಎಲ್‌ ರಾಹುಲ್‌, ಇವರ ಜಾಗ ತುಂಬೋರ್ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​​​ ತಂಡ ಕಳಪೆ ಪ್ರದರ್ಶನ ನೀಡಿದ್ದು, ಕ್ಯಾಪ್ಟನ್‌ ಕೆ.ಎಲ್‌ ರಾಹುಲ್‌ಗೆ ಲಕ್ನೋ ಸೂಪರ್​ ಜೈಂಟ್ಸ್​​​ ತಂಡದ ಮಾಲೀಕ ಸಂಜೀವ್​​ ಗೊಯೆಂಕಾ ಕ್ಲಾಸ್‌ ತೆಗೆದುಕೊಂಡಿದ್ದ ವಿಡಿಯೋ ವೈರಲ್‌ ಆಗಿತ್ತು.

ವಿಡಿಯೋ ನೋಡಿದ ನೆಟ್ಟಿಗರು ಯಾವುದೇ ಮಾಲೀಕ ಆಗಿರಲಿ, ಎಲ್ಲರೆದುರು ಆಟಗಾರರನ್ನು ನಿಂದಿಸುವುದು ತಪ್ಪು ಎಂದು ಅಭಿಪ್ರಾಯ ಪಟ್ಟಿದ್ದರು. ಕೆ.ಎಲ್‌ ರಾಹುಲ್‌ಗೆ ತಂಡ ಬಿಟ್ಟು ಬರುವಂತೆ ಮನವಿ ಮಾಡಿದ್ದರು.

ವಿಡಿಯೋ ವೈರಲ್‌ ಆದ ನಂತರ ಇದೀಗ ರಾಹುಲ್‌ ಕ್ಯಾಪ್ಟನ್ಸಿ ಬಿಟ್ಟು ಬಿಡುತ್ತಾರಾ ಎನ್ನುವ ಪ್ರಶ್ನೆ ಎದ್ದು ಕಾಣುತ್ತಿದೆ. ಮುಂದಿನ ಎರಡು ಪಂದ್ಯಗಳಿಂದ ರಾಹುಲ್ ಹೊರಗುಳಿಯಲಿದ್ದು, ಎಲ್​ಎಸ್​ಜಿ ತಂಡ ಹೊಸ ನಾಯಕನೊಂದಿಗೆ ಆಡುವ ಸಾಧ್ಯತೆ ಇದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರವ ಮಾಹಿತಿ ಪ್ರಕಾರ, ವೆಸ್ಟ್​ ವಿಂಡೀಸ್ ಆಟಗಾರ ನಿಕೊಲಸ್ ಪೂರನ್​ ಅವರನ್ನು ನೂತನ ಕ್ಯಾಪ್ಟನ್ ಮಾಡಲಿದ್ದಾರೆ. ಪೂರನ್​ ಅವರು ಮುಂದಿನ ಪಂದ್ಯಗಳನ್ನು ಮುನ್ನಡೆಸಲಿದ್ದಾರೆ​ ಎಂದು ಸುದ್ದಿಯಾಗಿದೆ. ಇದು ನಿಜವೋ ಇಲ್ಲವೋ ಎನ್ನುವ ಬಗ್ಗೆ ಟೀಂ ಮಾಹಿತಿ ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!