ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ವೈದ್ಯಕೀಯ ಆಯೋಗದ ಮುಖ್ಯಸ್ಥರಾಗಿ ಕನ್ನಡಿಗ ಡಾ. ಬಿ.ಎನ್. ಗಂಗಾಧರ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ನೇಮಕ ಮಾಡಿದ್ದು, ಕನ್ನಡಿಗರಿಗೆ ಸಂತಸ ತಂದಿದೆ.
ಡಾ. ಬಿ.ಎನ್. ಗಂಗಾಧರ್ರವರು ಪದ್ಮಶ್ರೀ ಪುರಸ್ಕೃತರು ಹೌದು. ಇವರು ನಿಮ್ಹಾನ್ಸ್ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ರಾಷ್ಟ್ರಮಟ್ಟದ ಉನ್ನತ ವೈದ್ಯಕೀಯ ಆಯೋಗಕ್ಕೆ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡಿದ್ದಾರೆ.
ಪ್ರಸ್ತುತ ಡಾ. ಗಂಗಾಧರ್ ವೈದ್ಯಕೀಯ ಮೌಲ್ಯಮಾಪನ ಹಾಗೂ ರೇಟಿಂಗ್ ಮಂಡಳಿ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮುಖ್ಯಸ್ಥರಾಗಿದ್ದ ಡಾ.ಎಸ್.ಸಿ ಶರ್ಮಾ ಅಧಿಕಾರ ಅವಧಿ ಕಳೆದ ಸೆಫ್ಟಂಬರ್ ನಲ್ಲಿ ಮುಗಿದಿತ್ತು. ಇದೀಗ ಕನ್ನಡಿಗರ ಆ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.