‘ಕಾಂತಾರ’ ಚಿತ್ರವನ್ನು ಮೆಚ್ಚಿ ಹೊಗಳಿದ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಹೊಂಬಾಳೆ ಬ್ಯಾನರ್ ನಡಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಆಕ್ಷನ್ ಥ್ರಿಲ್ಲರ್ ‘ಕಾಂತಾರ’ ಚಿತ್ರ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಪ್ರೀತಿಯನ್ನು ಗಳಿಸಿಕೊಂಡು ಎಲ್ಲೆಡೆ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.
ಕನ್ನಡದಲ್ಲಿ ತೆರೆಕಂಡ 15 ದಿನಗಳ ನಂತರ ಇದೀಗ ಹಿಂದಿ, ತೆಲುಗಿನಲ್ಲೂ ಕಾಂತಾರ ಅಬ್ಬರಿಸುತ್ತಿದೆ. ಈ ಚಿತ್ರವನ್ನು ನೋಡಿ ಪರಭಾಷೆಯ ಹಲವು ಸ್ಟಾರ್‌ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಭಾಸ್, ಧನುಷ್, ಅನಿಲ್ ಕುಂಬ್ಳೆ, ಪ್ರಶಾಂತ್ ನೀಲ್ ಸೇರಿದಂತೆ ಇನ್ನೂ ಅನೇಕ ಸೆಲೆಬ್ರಿಟಿಗಳಿಂದ ಮೆಚ್ಚುಗೆ ಗಳಿಸಿದ್ದು, ಇದೀಗ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಸಹ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ.
ಚಿತ್ರದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅನುಷ್ಕಾ ಶೆಟ್ಟಿ, ಕಾಂತಾರ ಚಿತ್ರ ತುಂಬಾ ಇಷ್ಟವಾಯಿತು. ಚಿತ್ರದ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು… ಕಾಂತಾರ ಚಿತ್ರತಂಡ ಅದ್ಭುತ ವನ್ನು ಸಾಧಿಸಿದ್ದೀರಿ.. ಅತ್ಯುತ್ತಮ ಅನುಭವಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು .. ರಿಷಬ್ ಶೆಟ್ಟಿ ನೀವು ಅದ್ಭುತವಾಗಿದ್ದೀರಿ, ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ತಪ್ಪದೇ ವೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ರಿಷಬ್​ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತ್​ ಕುಮಾರ್​, ಕಿಶೋರ್ ಮುಂತಾದ ಖ್ಯಾತನಾಮರು ನಟಿಸಿದ್ದಾರೆ. ಅಜನೀಶ್​ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಹಿಟ್‌ ಆಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!