ಕಾಂತಾರ ಖ್ಯಾತಿಯ ಕಿಶೋರ್​ ಕುಮಾರ್​ ಟ್ವಿಟರ್​ ಅಕೌಂಟ್ ಸಸ್ಪೆಂಡ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂತಾರ ದೇಶದೆಲ್ಲೆಡೆ ಅಬ್ಬರಿಸಿದ ಸಿನಿಮಾ. ಈ ಚಿತ್ರದಲ್ಲಿ ರಿಷಬ್ಶೆಟ್ಟಿ ನಟನೆ ಒಂದೆಡೆ ಎಲ್ಲರ ಮೆಚ್ಚುಗೆ ಗಳಿಸಿದರೆ, ಮತ್ತೊಂದೆಡೆ ಕಿಶೋರ್​ ಅವರ ನಟನೆ ಸಿನಿಮಾಗೆ ಮತ್ತಷ್ಟು ಜೀವ ನೀಡಿದೆ.
ಈ ಮೂಲಕ ಅವರು ಕೂಡ ನಾನಾ ರೀತಿ ಎಲ್ಲೆಡೆ ಸುದ್ದಿಯಲ್ಲಿದ್ದರು. ಆದ್ರೆ ಇದೀಗ ಮತ್ತೆ ಕಿಶೋರ್ ಸುದ್ದಿಯಲ್ಲಿದ್ದು, ಆದ್ರೆ ಸಿನಿಮಾ ವಿಚಾರದಲ್ಲಿ ಅಲ್ಲ. ಬದಲಾಗಿ ಅವರ ಟ್ವಿಟರ್​ ಖಾತೆ ಸಸ್ಪೆಂಡ್​ ಆಗಿದೆ.
ಈ ಬಗ್ಗೆ ಎಸ್​ ಶ್ಯಾಮ್​ ಪ್ರಸಾದ್​ ಎನ್ನುವವರು ಟ್ವೀಟ್​ ಮಾಡಿದ್ದಾರೆ. ಈಗ ಕೀಶೋರ್​ರ ಟ್ವಿಟರ್​ ಖಾತೆಗೆ ಹೋದರೆ, ಟ್ವಿಟರ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಖಾತೆಯನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಬರುತ್ತಿದೆ.ಈ ಬಗ್ಗೆ ಎಸ್​ ಶ್ಯಾಮ್​ ಪ್ರಸಾದ್​ರ ಟ್ವೀಟ್​ಗೆ ಜನರು ತರಹೇವಾರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!