Saturday, January 28, 2023

Latest Posts

ಕಾಂತಾರ ಸೂಪರ್ ಸಕ್ಸಸ್, ಆದ್ರೂ ರಿಷಬ್ ಶೆಟ್ಟಿಗೆ ಬೇಸರವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ನಾನಾ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ. ಬಾಲಿವುಡ್‌ನಲ್ಲಿ ಕಾಂತಾರ ಕಲೆಕ್ಷನ್‌ಗೆ ಬಾಲಿವುಡ್ ಸೆಲೆಬ್ರಿಟಿಗಳು ಬೆಚ್ಚಿಬಿದ್ದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಷಬ್ ಫೇಮಸ್ ಆಗಿದ್ದಾರೆ. ಇನ್ನೂ ಹತ್ತು ವರ್ಷ ಶೆಟ್ಟರನ್ನು ಯಾರೂ ಮಟ್ಟೋಕೆ ಸಾಧ್ಯ ಇಲ್ಲ ಎನ್ನುವ ಮಟ್ಟಿಗೆ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದಾರೆ.

ಇಷ್ಟೆಲ್ಲಾ ಸಕಸ್ಸ್ ಕಂಡರೂ ರಿಷಬ್ ಶೆಟ್ಟಿಗೆ ಬೇಸರವಾಗಿದೆಯಂತೆ, ಜನರು ದೈವದ ವೇಷ ತೊಟ್ಟು ರೀಲ್ಸ್ ಮಾಡೋದು, ಆಚಾರ ವಿಚಾರಗಳನ್ನು ಪಾಲಿಸದೇ ಇರುವುದು, ಪಬ್ಲಿಕ್ ಸ್ಟೇಜ್‌ಗಳಲ್ಲಿ ನೃತ್ಯ ಮಾಡೋದು ಈ ರೀತಿ ಮಾಡುವುದರಿಂದ ದೈವ ನರ್ತಕರಿಗೆ ಬೇಸರವಾಗಿದೆ. ಈ ಕಾರಣದಿಂದ ರಿಷಬ್ ಕೂಡ ನೊಂದುಕೊಂಡಿದ್ದಾರಂತೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!