ಪರಭಾಷೆಯಲ್ಲಿ ಸದ್ದು ಮಾಡುತ್ತಿದೆ ಕಾಂತಾರ: ಬಾಕ್ಸ್ ಆಫೀಸ್ ನಲ್ಲಿ ದಾಖಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಕಾಂತಾರ ಎಲ್ಲೇ ಹೋದರೂ ಈಗ ಈ ಸಿನಿಮಾದ್ದೇ ಸುದ್ದಿ. ದಿನೇ ದಿನೇ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿರುವ ಸಿನಿಮಾ ಜನ ಮೆಚ್ಚಿದೆ.
ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿದೆ.

‘ಕಾಂತಾರ’ ರಿಲೀಸ್ ಆಗಿ ಒಂದು ತಿಂಗಳಾಗಿದೆ. ಸಿನಿಮಾ ನೋಡಿದ ಬಹುತೇಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಡಬ್ ಆಗಿ ತೆರೆಕಂಡ ಮೂರು ಭಾಷೆಗಳಲ್ಲಿ ‘ಕಾಂತಾರ’ 100 ಕೋಟಿ ರೂಪಾಯಿ ಬಾಚಿದೆ.

‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ರಿಲೀಸ್ ಆಯಿತು. ಇದಾದ ಕೆಲ ವಾರಗಳ ಬಳಿಕ ಹಿಂದಿಯಲ್ಲಿ, ತೆಲುಗಿನಲ್ಲಿ ಹಾಗೂ ತಮಿಳಿನಲ್ಲಿ ಸಿನಿಮಾ ಬಿಡುಗಡೆ ಆಯಿತು. ಮೂಲಗಳ ಪ್ರಕಾರ ತೆಲುಗು, ತಮಿಳು ಹಾಗೂ ಹಿಂದಿ ಸೇರಿ ಈ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ.

ಹಿಂದಿಯಲ್ಲಿ ಈ ಬಗ್ಗೆ ಪಕ್ಕಾ ಲೆಕ್ಕ ಸಿಕ್ಕಿದೆ. ಗುರುವಾರ (ಅಕ್ಟೋಬರ್ 27) ಈ ಚಿತ್ರ ಬಾಲಿವುಡ್​ನಲ್ಲಿ 2.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಿನಿಮಾದ ಹಿಂದಿ ಭಾಗದ ಕಲೆಕ್ಷನ್ 31.70 ಕೋಟಿ ರೂಪಾಯಿ ಆಗಿದೆ.ಈ ಮೊದಲು ಹಿಂದಿಗೆ ಡಬ್ ಆಗಿ ತೆರೆಕಂಡಿದ್ದ ‘ಕೆಜಿಎಫ್’ ಚಿತ್ರ 44 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!