ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಲ್ಲಿ ಅಬ್ಬರಿಸಿದ ‘ಕಾಂತಾರ’ ಸಿನಿಮಾ ಈಗಾಗಲೇ ೫೦ ದಿನವನ್ನು ಪೂರೈಸಿದ್ದು, ಎಲ್ಲರಿಂದಲ್ಲೂ ಮೆಚ್ಚುಗೆ ಗಳಿಸಿದೆ. ದೇಶ ವಿದೇಶಾಗಲ್ಲು ಸಿನಿಮಾ ಮಂದಿರದತ್ತ ತಲೆಹಾಕದವರು ಕೂಡ ‘ಕಾಂತಾರ’ ದ ಅಬ್ಬರಕ್ಕೆ ಮನಸೋತು ಥಿಯೇಟರ್ ಮುಂದೆ ಬಂತು ನಿಂತಿದ್ದರು.
ಆದರೂ ಅನೇಕ ಮಂದಿಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಆದರೆ ಇದೀಗ ಖುಷಿ ವಿಚಾರ ಏನೆಂದರೆ ಕಾಂತಾರ ಒಟಿಟಿಗೆ ಲಗ್ಗೆ ಇಟ್ಟಿದೆ.
ನ.24ರಂದು ಈ ಚಿತ್ರ ಒಟಿಟಿ ಅಂಗಳದಲ್ಲಿ ಪ್ರಸಾರ ಆಗಲಿದೆ. ಈ ಬಗ್ಗೆ ‘ಅಮೇಜಾನ್ ಪ್ರೈಂ ವಿಡಿಯೋ’ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
‘ಕಾಂತರ’ ಸಿನಿಮಾದ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಒಟಿಟಿ ಪ್ರಸಾರ ಹಕ್ಕುಗಳನ್ನು ‘ಅಮೇಜಾನ್ ಪ್ರೈಂ ವಿಡಿಯೋ’ ಪಡೆದುಕೊಂಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಈ ಚಿತ್ರ ಒಟಿಟಿಗೆಯಲ್ಲಿ ಪ್ರಸಾರ ಆಗಬೇಕಿತ್ತು. ಆದರೆ ಅನೇಕ ಚಿತ್ರಮಂದಿರದಲ್ಲಿ ಉತ್ತಮವಾಗಿ ಪ್ರದರ್ಶನ ಆಗುತ್ತಿದ್ದ ಕಾರಣ ಒಟಿಟಿಯಲ್ಲಿ ಪ್ರಸಾರ ಆಗುವುದು ಕೊಂಚ ವಿಳಂಬ ಆಯಿತು. ಇದೀಗ ಅಂತಿಮವಾಗಿ ಒಟಿಟಿಗೆ ಲಗ್ಗೆ ಇಟ್ಟಿದೆ.