ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಖಾನ್ ಅವರು ತಮ್ಮ ಪೋಷಕರಾದ ರಣಧೀರ್ ಕಪೂರ್ ಮತ್ತು ಬಬಿತಾ ಅವರ ಮೇಲಿನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾನುವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ದೀಪಾವಳಿ ಸಂಭ್ರಮದ ಸುಂದರ ಚಿತ್ರಗಳನ್ನು ಹಂಚಿಕೊಂಡಿರುವ ಅವರು, ಪೋಷಕರ ಮಹತ್ವ ಸಾರುವ ಅತ್ಯಂತ ಭಾವುಕ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
https://www.instagram.com/p/DfehXblFGOm/?utm_source=ig_web_copy_link&obrf=NTc4MTIwNjQ2YQ==
ಮನಸೆಳೆದ ಫ್ಯಾಮಿಲಿ ಫೋಟೋ
ಕರೀನಾ ಹಂಚಿಕೊಂಡಿರುವ ಫೋಟೋದಲ್ಲಿ ಹಿರಿಯ ನಟ ರಣಧೀರ್ ಕಪೂರ್ ತಮ್ಮ ಪತ್ನಿ ಬಬಿತಾ ಅವರೊಂದಿಗೆ ಕುಳಿತಿದ್ದರೆ, ಅವರ ಪಕ್ಕದಲ್ಲಿ ಕರೀನಾ ಕಪೂರ್ ಮತ್ತು ಸಹೋದರಿ ಕರಿಷ್ಮಾ ಕಪೂರ್ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚುತ್ತಾ ಪೋಸ್ ನೀಡಿದ್ದಾರೆ. ಮತ್ತೊಂದು ಮುದ್ದಾದ ಫೋಟೋದಲ್ಲಿ ಕರೀನಾ ಹಿರಿಯ ಮಗ ತೈಮೂರ್, ತನ್ನ ತಾತ ರಣಧೀರ್ ಕಪೂರ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿರುವುದನ್ನು ಕಾಣಬಹುದು.
ಕರೀನಾ ಬರೆದ ಭಾವುಕ ಸಾಲು
ಈ ಸುಂದರ ಕೌಟುಂಬಿಕ ಚಿತ್ರಗಳಿಗೆ ಕರೀನಾ ಅವರು ಹಿಂದಿಯ ಹಳೆಯ ಪ್ರಸಿದ್ಧ ಹಾಡಿನ ಸಾಲುಗಳನ್ನು ಬಳಸಿ ಶೀರ್ಷಿಕೆ ನೀಡಿದ್ದಾರೆ. “ಜೀನಾ ಯಹಾ, ಮರ್ನಾ ಯಹಾ, ಮಾ ಔರ್ ಪಾಪಾ ಕೆ ಸಿವಾಯ್, ಜಾನಾ ಕಹಾ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು… ನಮ್ಮ ಜೀವನದಲ್ಲಿ ಎಲ್ಲವೂ ಸದಾ ಪೋಷಕರನ್ನು ಪ್ರೀತಿಸುವುದರ ಸುತ್ತಲೇ ಇರಬೇಕು” ಎಂದು ಬರೆದಿದ್ದಾರೆ. ಇದಕ್ಕೆ ಕರಿಷ್ಮಾ ಕಪೂರ್ ಕೂಡ ‘ಹೃದಯ’ದ ಎಮೋಜಿ ಹಾಕಿ “ಯಾವಾಗಲೂ” ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
ಸ್ಟಾರ್ ಪಾರ್ಟಿಯಲ್ಲಿ ಸೈಫ್-ಕರೀನಾ ಜೋಡಿ
ಕೌಟುಂಬಿಕ ಆಚರಣೆಯ ಜೊತೆಗೆ, ಬಾಲಿವುಡ್ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ್ದ ಅದ್ದೂರಿ ದೀಪಾವಳಿ ಪಾರ್ಟಿಯಲ್ಲೂ ಕರೀನಾ ಕಪೂರ್ ತಮ್ಮ ಪತಿ ಸೈಫ್ ಅಲಿ ಖಾನ್ ಅವರೊಂದಿಗೆ ಭಾಗವಹಿಸಿದ್ದರು. ಕಪ್ಪು ಮತ್ತು ಚಿನ್ನದ ಬಣ್ಣದ ಭವ್ಯ ಉಡುಪು ಧರಿಸಿದ್ದ ಈ ಜೋಡಿ ಕ್ಯಾಮೆರಾಗಳಿಗೆ ಪೋಸ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಹಬ್ಬದ ದಿನದಂದು ಬಾಲಿವುಡ್ನ ಅದ್ದೂರಿ ತನಕ್ಕಿಂತ ಪೋಷಕರೊಂದಿಗಿನ ಬಾಂಧವ್ಯಕ್ಕೆ ಕರೀನಾ ಆದ್ಯತೆ ನೀಡಿರುವುದು ಅವರ ಅಭಿಮಾನಿಗಳ ಮನ ಮುಟ್ಟಿದೆ.



