Friday, July 1, 2022

Latest Posts

ಸಿಧು ಮೂಸೆವಾಲಾ ಹತ್ಯೆಯ ಆರೋಪಿಯಿಂದ ಕರಣ್‌ ಜೋಹರ್‌ಗೆ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
‌ಬಾಲಿವುಡ್‌ ನಿರ್ಮಾಪಕ ಕರಣ ಜೋಹರ್‌ ಅವರಿಂದ 5 ಕೋಟಿ ರೂಪಾಯಿ ಸುಲಿಗೆ ಮಾಡುವ ಯೋಜನೆಯ ಹಿಂದೆ ಪಂಜಾಬಿನ ಗಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಸಿಧುಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿ ಸೌರಭ್‌ ಮಹಾಕಾಲ್ ಹಾಗೂ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನ ಕೈವಾಡವಿದೆಯೆಂದು ಮೂಲಗಳು ವರದಿ ಮಾಡಿವೆ.

ಬಿಷ್ಣೋಯಿ ಗ್ಯಾಂಗ್‌ ನ ರಾಡಾರ್‌ನಲ್ಲಿ ಕರಣ್‌ ಜೋಹರ್‌ ಇರುವುದಾಗಿ ಸೌರಭ್‌ ಮಹಾಕಾಲಗ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಇದು ಪೋಲೀಸರ ದಾರಿ ತಪ್ಪಿಸುವ ಹೇಳಿಕೆಯೂ ಆಗಿರಬಹುದು ಎನ್ನಲಾಗಿದೆ. ಈ ಹಿಂದೆ ಸಲ್ಮಾನ್ ಖಾನ್ ಗೆ ಬೆದರಿಕೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದೂ ಮಹಾಕಾಲ್ ಹೇಳಿದ್ದ.

ಪ್ರಸ್ತುತ ಕರಣ್‌ ಜೋಹರ್‌ ಬೆದರಿಕೆಯ ಪತ್ರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss