CINEMA| ʻನಾಟು ನಾಟು ಹಾಡು ಹಾಕಿದ್ರೆ ಮಾತ್ರ ನನ್ನ ಮಗ ಅನ್ನ ತಿನ್ನುತ್ತಾನೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

RRR ಚಿತ್ರದ ನಾಟು ನಾಟು ಜಗತ್ಪ್ರಸಿದ್ದಿಯಾಗಿದೆ. ಸಿನಿಮಾ ರಿಲೀಸ್ ಆಗಿ ವರ್ಷವಾಗಿದ್ದರೂ ಎಲ್ಲರೂ ಅದೇ ಗುಂಗಲ್ಲಿದ್ದಾರೆ. ಇತ್ತೀಚೆಗೆ ಆರ್‌ಆರ್‌ಆರ್ ತಂಡ ಆಸ್ಕರ್ ಪ್ರಶಸ್ತಿ ಗೆದ್ದ ನಂತರ ಭಾರತಕ್ಕೆ ಬಂದಿದ್ದು, ಭಾರತದಲ್ಲಿ ಭವ್ಯ ಸ್ವಾಗತ ಸಿಕ್ಕಿದೆ.

ಬಾಲಿವುಡ್ ನಟಿ ಕರೀನಾ ಕಪೂರ್ ನಾಟು ನಾಟು ಹಾಡಿನ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಕರೀನಾ ʻವಾಟ್ ವುಮೆನ್ ವಾಂಟ್ʼ ಎಂಬ ಶೋವನ್ನು ಹೋಸ್ಟ್ ಆಗಿ ಮಾಡುತ್ತಿದ್ದು, ಇತ್ತೀಚಿನ ಸಂಚಿಕೆಯಲ್ಲಿ ಕರೀನಾ ನಾಟು ನಾಟು ಬಗ್ಗೆ ಮಾತನಾಡಿದ್ದಾರೆ.

ಕರೀನಾ ಕಪೂರ್ ಹೇಳಿದ್ದು..ನಾಟು ನಾಟು ಹಾಡು ಇತಿಹಾಸ ಸೃಷ್ಟಿಸಿದೆ. ಈ ಹಾಡು ಚಿಕ್ಕ ಮಕ್ಕಳ ಹೃದಯವನ್ನೂ ಸೆಳೆದಿದೆ. ನನ್ನ ಪುಟ್ಟ ಮಗ ಜೆಹ್ ನಾಟು ನಾಟು ಹಾಡನ್ನು ಹಾಕದಿದ್ರೆ ಅನ್ನ ತಿನ್ನುವುದಿಲ್ಲ. ತೆಲುಗಿನಲ್ಲೂ ಕೇಳಲು ಇಷ್ಟಪಡುತ್ತಾರೆ. ಜೆಹ್‌ಗೆ ಆ ಹಾಡು ತುಂಬಾ ಇಷ್ಟ. ಆ ಹಾಡು ಕೇಳಿದಾಗಲೆಲ್ಲ ಖುಷಿಯಿಂದ ಕುಣಿಯುತ್ತಾನೆ. ಆಸ್ಕರ್ ಪ್ರಶಸ್ತಿ ವಿಜೇತ ಹಾಡು ಪ್ರೇಕ್ಷಕರಿಗೆ ಎಷ್ಟು ಮ್ಯಾಜಿಕ್ ಮಾಡಿದೆ ಎಂಬುದಕ್ಕೆ ಇದು ಉದಾಹರಣೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!