ಪ್ರಧಾನಿ ಮೋದಿಯನ್ನು ಭೇಟಿಯಾದ ಕರೀನಾ ಕಪೂರ್‌ ಫ್ಯಾಮಿಲಿ, ಫೋಟೊಸ್‌ ವೈರಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಕುಟುಂಬ ಪಿಎಂ ನರೇಂದ್ರ ಮೋದಿ  ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ರಾಜ್ ಕಪೂರ್ 100ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಕಪೂರ್‌ ಕುಟುಂಬ ಆಹ್ವಾನ ನೀಡಿದೆ.

ಇದೇ ಡಿ.14ರಂದು ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನವಾಗಿದ್ದು, 2024ಕ್ಕೆ 100ನೇ ವರ್ಷದ ಬರ್ತ್ಡೇ ಸಂಭ್ರಮ. ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಗೌರವಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಕೂಡ ಕಪೂರ್ ಕುಟುಂಬ ಆಯೋಜಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಿಎಂ ಕಚೇರಿಯಲ್ಲಿ ಕಪೂರ್ ಫ್ಯಾಮಿಲಿ ಮೋದಿರನ್ನು ಭೇಟಿ ಮಾಡಿ ಆಹ್ವಾನ ನೀಡಿದೆ.

ಕರೀನಾ ಕಪೂರ್ ದಂಪತಿ, ನೀತು ಕಪೂರ್, ಆಲಿಯಾ- ರಣ್‌ಬೀರ್ ಕಪೂರ್ ಜೋಡಿ, ಕರೀಷ್ಮಾ ಕಪೂರ್ ಕುಟುಂಬಸ್ಥರು ಮೋದಿರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಮಕ್ಕಳಾದ ಟಿಮ್ ಮತ್ತು ಜೆಹ್ ಹೆಸರನ್ನು ಬರೆದು ಪಿಎಂ ಆಟೋಗ್ರಾಫ್ ನೀಡಿರೋದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಕರೀನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೋದಿರವರ ಸರಳತೆ ಮತ್ತು ಬೆಂಬಲವನ್ನು ಕೊಂಡಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!