ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ನಟನೆಯ ಕರಿಯ ಸಿನಿಮಾಗೆ ಇಪ್ಪತ್ತು ವರ್ಷ ತುಂಬಿದ್ದು, ಇದೀಗ ರೀ ರಿಲೀಸ್‌ಗೆ ರೆಡಿಯಾಗಿದೆ.
ಇದೇ ಹಿನ್ನೆಲೆಯಲ್ಲಿ ಈಗ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗಿ ತೆರೆಯ ಮೇಲೆ ಬಂದಿದ್ದು, ದರ್ಶನ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ, ಡಿ ಬಾಸ್ ಸಿನಿಮಾ ಮತ್ತೆ ರಿಲೀಸ್ ಆದ ಖುಷಿಯಲ್ಲಿರುವ ಫ್ಯಾನ್ಸ್ಗಳು, ವೈರಲ್ ಆದ ಜೈಲಿನ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದಾರೆ.
. ಅತಿರೇಕದ ಅಭಿಮಾನ, ದಾಸನಿಗಾಗಿ ಯಾವುದೇ ಮಟ್ಟಕ್ಕೂ ಹೋಗೋಕು ಸಿದ್ಧವಿರುವ ಅಭಿಮಾನಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಿನಿಮಾ ರಿಲೀಸ್ ಆಗಿದೆ, ನಿಮ್ಮ ಸಂಭ್ರಮಕ್ಕೆ ಯಾವುದೇ ಅಡ್ಡಿಯಿಲ್ಲ. ಆದ್ರೆ ಗಲಾಟೆ, ದೊಂಬಿಯಂತಹ ಯಾವುದೇ ಕೆಲಸವನ್ನು ಮಾಡಬಾರದು ಅಂತ ಖಡಕ್ ಸೂಚನೆ ಕೊಟ್ಟಿದ್ದಾರೆ.