ಕರ್ನಾಟಕ ವಿಧಾನಸಭೆ ಚುನಾವಣೆ | ಒಂದೇ ಹಂತದಲ್ಲಿ ಮತದಾನ ಸಾಧ್ಯತೆ: ಚುನಾವಣಾ ಆಯೋಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸುತ್ತಿದ್ದು, ಈ ಕುರಿತು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಶನಿವಾರ ಮಾಹಿತಿ ನೀಡಿದರು.

ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹಲವಾರು ಮಾಹಿತಿ ಸಂಗ್ರಹ ಮಾಡಿದ್ದೇವೆ. ಮೇ. 24ರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಗ್ರಾಮಾಂತರದಲ್ಲಿ ಶೇ. 80ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ಇನ್ನು ಚುನಾವಣಾ ಸಮಾವೇಶಗಳಿಗೆ ಆನ್‌ಲೈನ್‌ನಲ್ಲೂ ಅನುಮತಿಗೆ ಅರ್ಜಿ ಸಲ್ಲಿಸಬಹುದು. ನಾಮಪತ್ರ ಆನ್‌ಲೈನ್‌ನಲ್ಲೂ ಸಲ್ಲಿಸುವ ಅವಕಾಶವಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿದ್ದರೆ, 2.62 ಕೋಟಿ ಪುರುಷ ಮತದಾರರು , ಮಹಿಳಾ ಮತದಾರರು 2.59 ಕೋಟಿ ಇದ್ದಾರೆ. ಅದರೊಂದಿಗೆ ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ 16, 796 ಮತದಾರರಿದ್ದಾರೆ. ಕ ಈ ಬಾರಿ ಮತದಾನ ಪ್ರಮಾಣವನ್ನು ಏರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಈ ನಡುವೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮನವಿ ಬಂದಿದ್ದು, ಈ ಕುರಿತಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 4699 ತೃತೀಯ ಲಿಂಗಿ ಮತದಾರರಿದ್ದಾರೆ. 9.17 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಇನ್ನೂ 80 ವರ್ಷಕ್ಕಿಂತ ಹೆಚ್ಚಿನ 12.15 ಲಕ್ಷ ಮತದಾರರಿದ್ದರೆ. 5.55 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಮೊದಲ ಬಾರಿಯ ಮನೆಯಲ್ಲೇ‌ ಮತದಾನ ಮಾಡುವ ಅವಕಾಶವನ್ನೂ ಈ ಬಾರಿ ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟಿರುವ ಮತ್ತು ವಿಕಲಚೇತನರಿಗೆ ಮನೆಯಲ್ಲೇ ಮತದಾನದ ‌ಮಾಡುವ ಅವಕಾಶ ಇರಲಿದೆ. ಮತಗಟ್ಟೆಗೆ ಬರಲು ಸಾದ್ಯವಾಗದವರಿಗೆ ವಯೋವೃದ್ದರು, ಅಂಗವಿಕಲರಿಗೆ ಮನೆಯಲ್ಲೇ ವೋಟಿಂಗ್ ಸೌಲಭ್ಯ ಇರಲಿದೆ ಎಂದು ಮಾಹಿತಿ ನೀಡಿದರು.

ಒಟ್ಟು 58, 282 ಮತಗಟ್ಟೆಗಳು, , 24,063 ನಗರ ಮತಗಟ್ಟೆಗಳು ಇರಲಿದ್ದರೆ, 34,219 ಗ್ರಾಮೀಣ ಮತಗಟ್ಟೆ ಇರಲಿದೆ. 1320 ಮತಗಟ್ಟೆಯಗಳನ್ನು ಮಹಿಳೆಯರು ನಿರ್ವಹಿಸಲಿದ್ದರೆ, 224 ಮತಗಟ್ಟೆಗಳನ್ನು ಯುವಕರು, 224 ಮತಗಟ್ಟೆಗಳನ್ನು ವಿಕಲಚೇತನರು ನಿರ್ವಹಿಸಲಿದ್ದಾರೆ. 240 ಮಾದರಿ ಮತಗಟ್ಟೆಗಳು ಕೂಡ ಇರಲಿದೆ ಎಂದು ಮಾಹಿತಿ ನೀಡಿದರು.

ಮತ ಕೇಂದ್ರಗಳ ಮಾಹಿತಿಗೆ ಆಪ್ ವ್ಯವಸ್ಥೆ ಮಾಡಲಾಗುತ್ತದೆ. ಸಂಪೂರ್ಣ ಮಾಹಿತಿ ಆಪ್ ನಲ್ಲಿ ಇರಲಿದೆ ವಿಕಲಚೇತನರಿಗೆ ವಿಶೇಷ ವ್ಯವಸ್ಥೆ ಬೂತ್ ನಲ್ಲಿ ಆಗಲಿದೆ. ಈ ಬಾರಿ ಇದನ್ನ ಹೆಚ್ಚಳ ಮಾಡಲು ಜಾಗೃತಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಈ ಬಾರಿ ಹೆಚ್ಚು ಬೆಂಗಳೂರು ನಗರ ಭಾಗದಲ್ಲಿ ಮತದಾನ ಆಗುವ ವಿಶ್ವಾಸ ಇದೆ. 2013ರಲ್ಲಿ ಶೇ.71.83ರಷ್ಟು ಮತದಾನವಾಗಿದ್ದರೆ, 2018ರಲ್ಲಿ 72.4%ರಷ್ಟು ಮತದಾನವಾಗಿತ್ತು.

ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಈ ವೆಟ್ ಸೈಟ್ ನಲ್ಲಿ ಸಿಗಲಿದೆ. ಸುವಿಧಾ ಮತ್ತು ಸಕ್ಷಮ್ ಆಪ್ ಮೂಲಕ ಮಾಹಿತಿ ಪಡೆಯಬಹುದು. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ ಬಗ್ಗೆಯೂ ಮಾಹಿತಿ ಇರಲಿದೆ. ರಾಜಕೀಯ ‌ಪಕ್ಷಗಳು, ಕ್ರಿಮಿನಲ್ ಹಿನ್ನಲೆ ಇರುವವರ ಬಗ್ಗೆ ರಾಜ್ಯ ಮತ್ತು ಸ್ಥಳೀಯ ಪತ್ರಿಕೆಯಲ್ಲಿ ಯಾಕೆ ಆಯ್ಕೆ ಮಾಡಿದ್ದೇವೆ ಅಂತ ಮಾಹಿತಿ ಕೊಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!