ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Election 2023 ) ಇಂದಿನಿಂದ ನಾಮಪತ್ರ ( Nomination File) ಸಲ್ಲಿಕೆ ಆರಂಭವಾಗಿದೆ.
ಮೊದಲ ದಿನವೇ ರಾಜ್ಯದ ವಿವಿಧೆಡೆ 221 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಈ ಕುರಿತಂತೆ ಇಂದು ರಾಜ್ಯ ಚುನಾವಣಾ ಆಯೋಗವು ಮಾಹಿತಿಯನ್ನು ನೀಡಿದ್ದು, ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಮೊದಲ ದಿನದ ಇಂದು 197 ಪುರುಷ ಅಭ್ಯರ್ಥಿಗಳು, 24 ಮಹಿಳಾ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿರುವುದಾಗಿ ತಿಳಿಸಿದೆ.
ಬಿಜೆಪಿ ಪಕ್ಷದಿಂದ 27 ಅಭ್ಯರ್ಥಿಗಳು, ಕಾಂಗ್ರೆಸ್ ಪಕ್ಷದಿಂದ 26, ಎಎಪಿ ಪಕ್ಷದಿಂದ 10, ಬಿಎಸ್ಪಿ ಪಕ್ಷದಿಂದ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ 100 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಟ್ಟು ಮೊದಲ ದಿನವೇ ರಾಜ್ಯಾಧ್ಯಂತ 221 ಮಂದಿ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿರುವುದಾಗಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಮಾಹಿತಿಯನ್ನು ನೀಡಿದೆ.