ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕ ಬಂದ್ ನಡೆಯುತ್ತಿದೆ, ಬಂದ್ ಬಿಸಿ ವಿಮಾನ ಪ್ರಯಾಣಕ್ಕೂ ತಟ್ಟಿದ್ದು, ಪ್ರಯಾಣಿಕರಿಲ್ಲದೆ ಒಟ್ಟು 44 ವಿಮಾನಗಳು ರದ್ದಾಗಿವೆ.
ಬೆಂಗಳೂರಿನಿಂದ ಹೊರಡುವ ಹಾಗೂ ನಿರ್ಗಮಿಸುವ ವಿಮಾನಗಳು ರದ್ದಾಗಿದ್ದು, ಒಟ್ಟಾರೆ ೪೪ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಒಟ್ಟು 22 ವಿಮಾನಗಳು ರದ್ದಾಗಿವೆ, ಬೆಂಗಳೂರಿನಿಂದ ದೆಹಲಿ, ಮುಂಬೈ, ಕೊಲ್ಕತ್ತಾ ಹಾಗೂ ಮಂಗಳೂರಿಗೆ ಹೋಗಬೇಕಿದ್ದ 22 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ.