ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆ.29 ರಂದು ‘ಕರ್ನಾಟಕ ಬಂದ್’ ನಡೆಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೆ.29ರ ಕರ್ನಾಟಕ ಬಂದ್ ಗೆ ಬಹುತೇಕ ಬೆಂಬಲ ಸಿಕ್ಕಿದೆ. ಎಲ್ಲಾ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಂದು ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ‘ಕರ್ನಾಟಕ ಬಂದ್’ ಗೆ ಕರೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಟೌನ್ ಹಾಲ್ ನಿಂದ ಪ್ರೀಡಂ ಪಾರ್ಕ್ ವರೆಗೆ ಪ್ರತಿಭಟನೆ ನಡೆಯಲಿದೆ. ಟೋಲ್, ವಿಮಾನ, ಹೆದ್ದಾರಿ, ರೈಲು ಸೇವೆ ಸೇರಿದಂತೆ ಎಲ್ಲಾ ಬಂದ್ ಆಗಲಿದೆ ಎಂದರು.