ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಕಾವೇರಿ ನೀರು ಹರಿಬಿಡುತ್ತಿರುವ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಸಾವಿರಕ್ಕೂ ಹೆಚ್ಚು ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳು ಬಂದ್‌ಗೆ ಸಾಥ್ ನೀಡಿದ್ದಾರೆ.
ಬಂದ್ ಎಷ್ಟು ಸಮಯ ಇರಲಿದೆ? ಈ ಸಮಯದಲ್ಲಿ ಏನೆಲ್ಲಾ ಸಿಗಲಿದೆ? ಮಾಹಿತಿ ಇಲ್ಲಿದೆ..
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ ಇರಲಿದೆ. ಕನ್ನಡ ಪರ ಹೋರಾಟಗಾರರು ಟೋಲ್‌ಗಳಿಗೆ ಮುತ್ತಿಗೆ ಹಾಕಿ ಹೆದ್ದಾರಿ ಬ್ಲಾಕ್ ಮಾಡುವ ಇರಾದೆ ಹೊಂದಿದ್ದಾರೆ. ಇನ್ನು ವಿಮಾನ ನಿಲ್ದಾಣಕ್ಕೂ ಮುತ್ತಿಗೆ ಹಾಕುವ ಯೋಜನೆ ಮಾಡಲಾಗಿದೆ.
ಏನಿದೆ?
ತುರ್ತು ಸೇವೆ
ಮೆಡಿಕಲ್ ಶಾಪ್
ಆಂಬುಲೆನ್ಸ್
ಹಾಲು ತರಕಾರಿ
ಏನಿಲ್ಲ?
ಹೊಟೇಲ್
ಥಿಯೇಟರ್
ಮಾಲ್
ಕ್ಯಾಬ್
ಆಟೋ
ಓಲಾ, ಉಬರ್
ಮೆಟ್ರೋ ಸೇವೆ, ಶಾಲಾ ಕಾಲೇಜುಗಳು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇವೆ ಇರುತ್ತದೋ ಇಲ್ಲವೋ ನಿರ್ಧಾರವಾಗಿಲ್ಲ.