ರಾಜ್ಯದ 188 ಗ್ರಾಮ ಪಂಚಾಯಿತಿಗಳ 430 ಸ್ಥಾನಗಳಿಗೆ ಜುಲೈ 23 ರಂದು ಚುನಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಾದ್ಯಂತ 188 ಗ್ರಾಮ ಪಂಚಾಯಿತಿಗಳ 430 ಸ್ಥಾನಗಳಿಗೆ ಚುನಾವಣೆಯ ದಿನಾಂಕವನ್ನು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ನಿಗದಿಪಡಿಸಿದೆ.

ಈ ಕುರಿತು ಆಯೋಗವು ಅಧಿಸೂಚನೆ ಹೊರಡಿಸಿದ್ದು, ಜುಲೈ 23 ರಂದು ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಜುಲೈ 26 ರಂದು ಮತ ಎಣಿಕೆ ನಡೆಯಲಿದೆ.

14 ಗ್ರಾಮ ಪಂಚಾಯಿತಿಗಳ 207 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಆಗಸ್ಟ್‌ನಲ್ಲಿ ಇವುಗಳ ಅವಧಿ ಮುಕ್ತಾಯವಾಗಲಿದೆ. ಅಲ್ಲದೆ ವಿವಿಧ ಕಾರಣಗಳಿಂದ ತೆರವಾಗಿರುವ 174 ಗ್ರಾಮ ಪಂಚಾಯಿತಿಗಳ 223 ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!