BOLLYWOOD | ಶೂಟಿಂಗ್ ವೇಳೆ ಗಾಯಗೊಂಡ ಶಾರುಖ್, ವಿದೇಶದಲ್ಲಿ ಶಸ್ತ್ರಚಿಕಿತ್ಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಜವಾನ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಅಟ್ಲೀ ನಿರ್ದೇಶನದ ಜವಾನ್ ಶೂಟಿಂಗ್ ವೇಳೆ ಅಪಘಾತವಾಗಿದ್ದು, ಶಾರುಖ್ ಮೂಗಿಗೆ ಗಾಯವಾಗಿದ್ದು ರಕ್ತಸ್ರಾವವಾಗಿದೆ. ಇದರಿಂದಾಗಿ ಶಾರುಖ್‌ಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ವಿದೇಶಕ್ಕೆ ಹಾರಿದ್ದಾರೆ.

Jawan Box Office History! Gets Boosted By 36 Crore Way Before Its Release,  Shah Rukh Khan Starrer's Music Rights Sold For A Record Priceಲಾಸ್‌ಏಂಜಲಿಸ್‌ನ ಆಸ್ಪತ್ರೆಯಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೂಗಿಗೆ ಹೊಡೆದ ಬಿದ್ದು ರಕ್ತಸ್ರಾವ ನಿಲ್ಲುತ್ತಿರಲಿಲ್ಲ, ಸಣ್ಣ ಶಸ್ತ್ರಚಿಕಿತ್ಸೆಯಿಂದ ರಕ್ತಸ್ರಾವ ನಿಲ್ಲಿಸಬಹುದು ಎಂದು ವೈದ್ಯರು ಸೂಚಿಸಿದ್ದು, ಶಸ್ತ್ರಚಿಕಿತ್ಸೆ ಬಳಿಕ ಇದೀಗ ಶಾರುಖ್ ಭಾರತಕ್ಕೆ ವಾಪಾಸಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!