ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರು ಬದಲಾವಣೆ: ರಾಜ್ಯ ಸರಕಾರ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ರಾಜ್ಯ ಸರಕಾರ ಬದಲಾಯಿಸಿ ಆದೇಶ ಹೊರಡಿಸಿದೆ.

ಮಂಡಳಿ ನಿರ್ದೇಶಕರು ಹೆಚ್. ಎನ್. ಗೋಪಾಲಕೃಷ್ಣ ಈ ಕುರಿತು ಆದೇಶವನ್ನು ಹೊರಡಿಸಿದ್ದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ’ ಎಂದು ಬದಲಾವಣೆ ಮಾಡಲಾಗಿದ್ದು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಸಹ ಅಧಿಸೂಚನೆ ಪ್ರಕಟಿಸಿದೆ.ಇನ್ಮುಂದೆ ಕಡತ, ಮೊಹರು, ಪತ್ರ ವ್ಯವಹಾರದಲ್ಲಿಯೂ ಹೊಸ ಹೆಸರು ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.

ಈ ಕಚೇರಿಯಿಂದ ನಡೆಸುವ ಯಾವುದೇ ಪತ್ರ ವ್ಯವಹಾರ ಹಾಗೂ ಇನ್ನಿತರ ಕಡತಗಳಿಗೆ ಮೊಹರು ಹಾಕುವ ಸಂದರ್ಭದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು 56003 ಎಂಬ ಹೆಸರಿನಲ್ಲಿ ವ್ಯವಹರಿಸಲು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!