ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈ ಬಾರಿ ‘ಕರ್ನಾಟಕ ಕರಕುಶಲ ಕಲಾವೈಭವ’ ಧ್ಯೇಯದ ಅನ್ವಯ ಸ್ತಬ್ದಚಿತ್ರ ಪ್ರದರ್ಶನವಾಗಿದೆ. ಇಳಕಲ್ ಸೀರೆ, ಚನ್ನಪಟ್ಟಣದ ಬೊಂಬೆ ಜೊತೆಗೆ ಜಿಐ ಟ್ಯಾಗ್ ಪಡೆದಿರುವ 16 ಕರಕುಶಲ ವಸ್ತುಗಳ ಅನಾವರಣವಾಗಿದೆ.
ಪರೇಡ್‌ನಲ್ಲಿ 12 ರಾಜ್ಯಗಳ ಸ್ತಬ್ದಚಿತ್ರಗಳು ಪ್ರದರ್ಶನವಾಗಿವೆ. ಸತತ 13ನೇ ವರ್ಷವೂ ಕರ್ನಾಟಕದ ಸ್ತಬ್ದಚಿತ್ರಗಳು ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ಸ್ತಬ್ದಚಿತ್ರ ಕರ್ನಾಟಕದ್ದಾಗಿದೆ.
- ಸ್ತಬ್ದಚಿತ್ರದಲ್ಲಿ ಏನೇನಿದೆ?
ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರು ಬೀಟೆ ಮರ ಮತ್ತು ದಂತದ ಕಸೂತಿ ಇರುವ ಆನೆಯ ಕಲಾಕೃತಿ ರಚಿಸಲಾಗಿದೆ.ಕಲಾಕೃತಿ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟ ಮತ್ತು ಗಂಜೀಫಾ ಕಲೆಗಳ ಚಿತ್ರಣವಿದೆ.
ಮಧ್ಯಭಾಗದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಹೂಜಿ ಇದ್ದು, ಇದರ ಪಕ್ಕದಲ್ಲಿ ಕರಾವಳಿಯ ಭೂತಾರಾದನೆ ಬಿಂಬಿಸುವ ಲೋಹದ ಮುಖವಾಡಗಳಿವೆ.
ಇದರ ಹಿಂಬದಿಯಲ್ಲಿ ಬಿದರಿ ಕಲೆಯಲ್ಲಿ ಅರಳಿದ ನವಿಲುಗಳು, ಮಧ್ಯೆ ಕಿನ್ನಾಳ ಕಲೆಯಲ್ಲಿ ನಿಮಿಇಸಿದ ಆಂಜನಯ ಮೂರ್ತಿ ಇದೆ.
ಇದರ ಅಕ್ಕಪಕ್ಕದಲ್ಲಿ ಚನ್ನಪಟ್ಟಣದ ಬೊಂಬೆಗಳು, ನವಲಗುಂದದ ಧರಿ, ಶ್ರೀಗಂಧ ಕೆತ್ತನೆಯ ಕಲಾಕೃತಿಗಳು ಇವೆ.
ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹಿಸಿದ ಕಮಾದೇವಿ ಚಟ್ಟೋಪಾಧ್ಯಾಯ ಅವರು ಗಂಧದ ಪೆಟ್ಟಿಗೆಗಳು ಹಾಗೂ ಬಾಳೆ ನಾರಿನ ಚೀಲ ನೀಡುತ್ತಿರುವ ದೊಡ್ಡ ಪ್ರತಿಮೆ ಇದೆ.
ಇಳಕಲ್ ಸೀರೆ, ಮೊಳಕಾಲ್ಮೂರು ಸೀರೆ, ಮೈಸೂರು ರೇಷ್ಮೆ ಸೀರೆ, ಕಿನ್ನಾಳ ಕಲೆಯಿಂದ ತಯಾರಾದ ಕಲಾಕೃತಿಗಳಿವೆ.
The tableau of Karnataka at #RepublicDay parade depicting the theme 'Karnataka: The cradle of traditional Handicrafts' displayed over 16 GI tagged artefacts.
Karnataka's tableau decorated the Rajpath with its rich heritage of artisanship.@MinOfCultureGoI @CMofKarnataka pic.twitter.com/6WzUCnLwst
— Dr Sudhakar K (@mla_sudhakar) January 26, 2022