ಕರ್ನಾಟಕ ರಾಜ್ಯ ಚುನಾವಣೆ ಮತದಾನ ಮುಕ್ತಾಯ: ಮೇ 13 ರಂದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ರಾಜ್ಯ ಚುನಾವಣಾ ಮತದಾನ ಮುಕ್ತಾಯವಾಗಿದ್ದು, ಮೇ 13 ಕ್ಕೆ 224 ಕ್ಷೇತ್ರದ 2615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಶುರುವಾದ ಮತದಾನ ಇಂದು ಸಂಜೆ 6ಕ್ಕೆ ಮುಕ್ತಾಯವಾಗಿದೆ.

ಮತಕೇಂದ್ರಗಲ್ಲಿ ಸರತಿ ಸಾಲಿನಲ್ಲಿ ಮತದಾರರು ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಚುನಾವಣಾ ಆಯೋಗದ ಅಧಿಕೃತ ಮಾಹಿತಿ ಪ್ರಕಾರ ಇಂದು ಸಂಜೆ 5 ಗಂಟೆ ಹೊತ್ತಿಗೆ ಶೇ 65.69% ಮತದಾನವಾಗಿದೆ ಅಂತ ತಿಳಿಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಅಂತಿಮ ಮತದಾನದ ಶೇಕಡವಾರು ಮಾಹಿತಿಯನ್ನು ಕರ್ನಾಟಕ ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿಯನ್ನು ನೀಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!