Tuesday, February 27, 2024

ಕರ್ನಾಟಕ VS ಪಂಜಾಬ್ ರಣಜಿ ಪಂದ್ಯ | ದೇವದತ್ತ ಪಡಿಕಲ್ ಭರ್ಜರಿ ಶತಕ

ಹೊಸದಿಗಂತ ವರದಿ ಹುಬ್ಬಳ್ಳಿ:

ಮತ್ತೆ ಚಂದದ ಬ್ಯಾಟಿಂಗ್ ನಿಂದ ಯುವ ಆಟಗಾರ ದೇವದತ್ತ ಪಡಿಕಲ್ ಶತಕ ಬಾರಿಸಿ ಕರ್ನಾಟಕ ತಂಡವನ್ನು‌ ಮುನ್ನಡೆಸಿದ್ದಾರೆ.

ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ಶುಕ್ರವಾರ ಆರಂಭಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನ ಸಿ ಗುಂಪಿನ ಮೊದಲ ಲೀಗ್ ಪಂದ್ಯದ ಎರಡನೇ ಕರ್ನಾಟಕ ಮೂರು ವಿಕೆಟ್ ಕಳೆದುಕೊಂಡು 41.2 ಓವರ್ ಗೆ 172 ರನ್ ಗಳಿಸಿ ಮುನ್ನಡೆ ಸಾಧಿಸಿದೆ.

ದೇವದತ್ತ ಪಡಿಕಲ್ ಕೇವಲ 102 ಬಾಲ್ ಗೆ 16 ಬೌಂಡರಿ ನೆರವಿನಿಂದ ಶತಕ ಸಿಡಿಸಿ ಸಂಭ್ರಮಿಸಿದರು. ದೇವದತ್ತ ಪಡಿಕಲ್ ಅವರ ಶತಕಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಾಕ್ಷಿಯಾಗಿತು. ಇವರಿಗೆ ಮನೀಷ ಪಾಂಡೆ ಸಾಥ್ ನೀಡಿದ್ದು, 49 ಬಾಲ್ ಎದುರಿಸಿ 22 ರನ್ ಗಳಿಸಿದ್ದಾರೆ. ಇವರಿಬ್ಬರ ಜೊತೆಯಾಟ 93 ಬಾಲ್ ಗೆ 62 ರನ್ ಗಳಿಸಿದರು. ಶುಕ್ರವಾರ ಮೊದಲನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ ಮೂರು ವಿಕೆಟ್ ಕಳೆದುಕೊಂಡು 36 ಓವರ್ ಗೆ 142ರನ್ ಗಳಿಸಿದ್ದರು. ಪಂಚಾಬ್ ತಂಡ 152 ರನ್ ಆಲ್ ಔಟ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!