SRH ತಂಡದಿಂದ ಕರ್ನಾಟಕದ ರವಿಚಂದ್ರನ್ ಸ್ಮರಣ್ ಔಟ್! ಹರ್ಷ್ ದುಬೆಗೆ ಸಿಕ್ತು ಚಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2025ರ ಪಾಯಿಂಟ್ಸ್ ಟೇಬಲ್‌ನಲ್ಲಿ 9ನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದಿಂದ ಕರ್ನಾಟಕದ ಮೂಲದ ಬ್ಯಾಟರ್ ರವಿಚಂದ್ರನ್ ಸ್ಮರಣ್ ಅವರು ಹೊರಬಿದ್ದಿದ್ದಾರೆ.

ಹೈದರಾಬಾದ್ ತಂಡದಲ್ಲಿ ಆಡಂ ಜಂಪಾ ಬದಲು ಸ್ಥಾನ ಪಡೆದಿದ್ದ ಕರ್ನಾಟಕದ 22 ವರ್ಷದ ಬ್ಯಾಟ್ಸ್‌ಮನ್ ರವಿಚಂದ್ರನ್ ಸ್ಮರಣ್ ಗಾಯಗೊಂಡು ಟೂರ್ನಿಯಿಂದ ಹೊರಬಿದಿದ್ದಾರೆ. ಹಾಗಾಗಿ ಅವರ ಬದಲಿಗೆ ಫ್ರಾಂಚೈಸಿ ಹರ್ಷ್ ದುಬೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

22 ವರ್ಷದ ಹರ್ಷ್ ದುಬೆ, ದೇಶೀಯ ಕ್ರಿಕೆಟ್‌ನಲ್ಲಿ ಎಡಗೈ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಆಗಿದ್ದು, 69 ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಣಜಿ ಟ್ರೋಫಿ ಸೀಸನ್‌ ಒಂದರಲ್ಲಿ ಅತೀ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!