Thursday, December 8, 2022

Latest Posts

ಬಾಲಿವುಡ್ ಅಂಗಳದಲ್ಲಿ ಕರ್ವಾ ಚೌತ್​ ಸಂಭ್ರಮ: ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ ಪತ್ನಿಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಭಾರತದಲ್ಲಿ ವಿಶೇಷವಾಗಿನವ ವಿವಾಹಿತೆಯರು ಆಚರಿಸುವ ಹಬ್ಬ ಕರ್ವಾ ಚೌತ್​. ಪತಿಯ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುವುದು ಮತ್ತು ಈ ದಿನದಂದು ಉಪವಾಸ ಮಾಡುತ್ತಾರೆ. ಈ ಸಂಭ್ರಮದ ಹಬ್ಬವನ್ನು ಬಾಲಿವುಡ್​ ತಾರೆಯರು​ ಆಚರಿಸಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

ಬಾಲಿವುಡ್ ನಟ ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿ ಕರ್ವಾ ಚೌತ್​ ಆಚರಿಸಿದ್ದಾರೆ. ನಟ ವರುಣ್ ಧವನ್ ಇನ್ಸ್​​ಸ್ಟಾಗ್ರಾಮ್​ನಲ್ಲಿ ಕರ್ವಾ ಚೌತ್​ ಆಚರಣೆಯ ಫೋಟೋ ಶೇರ್ ಮಾಡಿದ್ದಾರೆ. ನತಾಶಾ ದಲಾಲ್ ಗುಲಾಬಿ ಬಣ್ಣದ ಸಿಂಪಲ್​ ಡ್ರೆಸ್​ ಧರಿಸಿದ್ರೆ, ವರುಣ್​ ಅದಕ್ಕೆ ಮ್ಯಾಚ್​ ಅಗುವ ಕೇಸರಿ ಕುರ್ತಾ ಧರಿಸಿದ್ದರು.

ಮೌನಿ ರಾಯ್ ಕೂಡ ಕರ್ವಾ ಚೌತ್​ ಹಬ್ಬದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಾಂಪ್ರದಾಯಿಕವಾಗಿ ಆಚರಿಸಿದರು. ಈ ವರ್ಷದ ಜನವರಿ ತಿಂಗಳಿನಲ್ಲಿ ದೀರ್ಘಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆಗೆ ನಟಿ ಮೌನಿ ರಾಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.


ಬಾಲಿವುಡ್​​ನ ನಟಿ ಕತ್ರಿನಾ ಕೈಫ್ ತಮ್ಮ ಮೊದಲ ಕರ್ವಾ ಚೌತ್ ವನ್ನು ಬಹಳ ಖುಷಿಯಿಂದ ಆಚರಿಸಿಕೊಂಡಿದ್ದಾರೆ. 2021ರ ಡಿಸೆಂಬರ್ 9ರಂದು ವಿಕ್ಕಿ ಕೌಶಲ್ ಅವರನ್ನು ಮದೆವೆಯಾಗಿದ್ದರು.
ಎಲ್ಲಾ ಸಾಂಪ್ರದಾಯಿಕ ಮಹಿಳೆಯರಂತೆ ಕತ್ರಿನಾ ಕೈಫ್​​ ಗುಲಾಬಿ ಬಣ್ಣದ ಸೀರೆಯುಟ್ಟು, ಜುಮ್ಕಿ-ಬಳೆ ಧರಿಸಿದ್ದಾರೆ.

ನಟಿ ಶಿಲ್ಪಾ ಶೆಟ್ಟಿ ಕೂಡ ತಮ್ಮ ಕರ್ವಾ ಚೌತ್ ಆಚರಣೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪ್ರತಿ ವರ್ಷದಂತೆ, ಅವರ ಪತಿ ರಾಜ್ ಕುಂದ್ರಾ ಕೂಡ ಶಿಲ್ಪಾ ಅವರ ಯೋಗಕ್ಷೇಮಕ್ಕಾಗಿ ಉಪವಾಸ ಮಾಡಿದರು.

ನಟಿ ಪ್ರೀತಿ ಝಿಂಟಾ, ಪ್ರಿಯಾಂಕ ಮತ್ತು ನಿಕ್ ಕೂಡ ಕರ್ವಾ ಚೌತ್ ವನ್ನು ಆಚರಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!