ಗೊಂದಲದ ನಡುವೆ ಇಂದು ಕೆಎಎಸ್‌ ಪ್ರಿಲಿಮ್ಸ್ ಪರೀಕ್ಷೆ, ಅಭ್ಯರ್ಥಿಗಳಿಗೂ ಟೆನ್ಶನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗೊಂದಲ, ಪ್ರತಿಭಟನೆಗಳ ಮಧ್ಯೆ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ಇಂದು ನಡೆಯುತ್ತಿದೆ. ಪರೀಕ್ಷೆಯಲ್ಲಿ ಸುಮಾರು 2.5 ಲಕ್ಷ ಆಕಾಂಕ್ಷಿಗಳು ಭಾಗಿಯಾಗಲಿದ್ದಾರೆ.

ಕೆಎಎಸ್ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಕೆಲವು ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ಸ್ ಅಸೋಸಿಯೇಷನ್​​ನಿಂದ ನಗರದ ಫ್ರೀಡಂ ಪಾರ್ಕ್​ನಲ್ಲಿ ಕೆಎಎಸ್ ಆಕಾಂಕ್ಷಿಗಳು ಪ್ರತಿಭಟನೆ ಮಾಡಿದ್ದರು. ಈ ಹೋರಾಟಕ್ಕೆ ಕೆಲವು ಬಿಜೆಪಿ ನಾಯಕರು ಸಾಥ್ ನೀಡಿದ್ದರು. ಕೊನೆ ಕ್ಷಣದವರೆಗೂ ಪರೀಕ್ಷೆ ಪೋಸ್ಟ್ ಪೋನ್ ಮಾಡಿಸುವ ಯತ್ನ ಮಾಡಲಾಗಿತ್ತು.

ರಾಜ್ಯ ಸರ್ಕಾರ ಹಾಗೂ ಕೆಪಿಎಸ್​ಸಿ ತನ್ನ ನಿರ್ಧಾರ ಬದಲಿಸಿಲ್ಲ. ಆಗಸ್ಟ್ 27ಕ್ಕೆ ಕೆಎಎಸ್ ಪರೀಕ್ಷೆ ನಡೆದೆ ನಡೆಯುತ್ತೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ಇಂದು ರಾಜ್ಯಾದ್ಯಂತ ಪರೀಕ್ಷೆ ಆಯೋಜನೆ ಆಗಿದೆ. ಒಟ್ಟು 384 ಹುದ್ದೆಗಳಿಗಾಗಿ ಪರೀಕ್ಷೆ ನಡೆಯುತ್ತಿವೆ. 2017-18 ಸಾಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಪರೀಕ್ಷೆ ಬರೆಯಲು ಕೊನೆ ಅವಕಾಶ ಕಲ್ಪಿಸಿದೆ. ಹೀಗಾಗಿ 2017-18 ಬ್ಯಾಚ್​ನ 1500ಕ್ಕೂ ಹೆಚ್ಚು ಮಂದಿ ಈ ಪರೀಕ್ಷೆ ಬರೆಯಲಿದ್ದಾರೆ.

ಮುಂದಿನ 2 ತಿಂಗಳವರೆಗೆ ಯಾವುದೇ ಭಾನುವಾರಗಳು ಖಾಲಿ ಇಲ್ಲದ ಕಾರಣದಿಂದಾಗಿ ಕೆಲಸದ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗಿದೆ. ಹಾಗಾಗಿ ಇದೇ ದಿನ ಎಕ್ಸಾಂ ನಡೆಸಲು ಸರ್ಕಾರ ತೀರ್ಮಾನಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!