ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರೇ ಮೂರು ದಿನಗಳಲ್ಲಿ ಸುರಿದ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ ಬರೋಬ್ಬರಿ 144 ಹೆಕ್ಟೇರ್ ಕೃಷಿ ಧ್ವಂಸಗೊಂಡಿದೆ. ಜುಲೈ 8 ರಿಂದ 12 ರ ತನಕ ಸುರಿದ ಮಳೆ ಜಿಲ್ಲೆಯ 398 ಕೃಷಿಕರಿಗೆ ಸುಮಾರು 49.19 ಲಕ್ಷ ರೂ. ನಷ್ಟ ಉಂಟುಮಾಡಿದೆ ಎಂದು ಕೃಷಿ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.
ಎಲ್ಲೆಲ್ಲಿ ಎಷ್ಟಷ್ಟು ಹಾನಿ?
ಕಾಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು 22.41 ಲಕ್ಷ ರೂ., ಕಾರಡ್ಕ ಬ್ಲಾಕ್ ನಲ್ಲಿ 2.02 ಲಕ್ಷ ರೂ., ಕಾಸರಗೋಡು ಬ್ಲಾಕ್ ನಲ್ಲಿ 0.73 ಲಕ್ಷ ರೂ., ಮಂಜೇಶ್ವರ ಬ್ಲಾಕ್ ನಲ್ಲಿ ಅಂದಾಜು 19.40 ಲಕ್ಷ ರೂ., ನೀಲೇಶ್ವರಂ ಬ್ಲಾಕ್ ನಲ್ಲಿ 3.44 ಲಕ್ಷ ರೂ., ಪರಪ್ಪ ಬ್ಲಾಕ್ ನಲ್ಲಿ 1.19 ಲಕ್ಷ ರೂ.ಗಳ ಬೆಳೆ ಹಾನಿಯಾಗಿದೆ.
ಎಲ್ಲೆಲ್ಲಿ ಎಷ್ಟು ಹೆಕ್ಟೇರ್?
ಕಾಂಗಾಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ 1.66 ಹೆಕ್ಟೇರ್, ಕಾರಡ್ಕ ಬ್ಲಾಕ್ ನಲ್ಲಿ 50.02 ಹೆಕ್ಟೇರ್, ಕಾಸರಗೋಡು ಬ್ಲಾಕ್ ನಲ್ಲಿ 0.17 ಹೆಕ್ಟೇರ್, ಮಂಜೇಶ್ವರ ಬ್ಲಾಕ್ ನಲ್ಲಿ 80 ಹೆಕ್ಟೇರ್,
ನೀಲೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ 12.47 ಹೆಕ್ಟೇರ್, ಪರಪ್ಪ ಬ್ಲಾಕ್ ಪಂಚಾ ಯತ್ ವ್ಯಾಪ್ತಿಯಲ್ಲಿ 0.09 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗೆ ಹಾನಿಯಾಗಿದೆ.
ಬೆಳೆ ಹಾನಿಗೆ ತುತ್ತಾದ ಕೃಷಿಕರೆಷ್ಟು?
ಕಾಂಗಾಡು ಬ್ಲಾಕ್ ಪಂಚಾಯತ್ ನ 87, ಕಾರಡ್ಕ ಬ್ಲಾಕ್ ನ 56, ಕಾಸರಗೋಡು ಬ್ಲಾಕ್ ನ 32, ಮಂಜೇಶ್ವರ ಬ್ಲಾಕ್ ನ 115, ನೀಲೇಶ್ವರ ಬ್ಲಾಕ್ ಪಂಚಾಯತ್ ನ 83, ಪರಪ್ಪ ಬ್ಲಾಕ್ ನ 25 ರೈತರು ಬೆಳೆ ಹಾನಿ ಗೆ ತುತ್ತಾಗಿದ್ದಾರೆ.