ಕಾಸರಗೋಡು: ಛಾಯಾಗ್ರಾಹಕರಿಂದ ವಿಶ್ವ ಪರಿಸರ ದಿನಾಚರಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಯೂನಿಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾಸರಗೋಡು ಜಿಲ್ಲೆತ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಪರಿಸರದಲ್ಲಿ ಶ್ರೀ ಮಂದಿರದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮವನ್ನು ಹಿರಿಯರಾದ ಶಿವಪ್ಪ ಓಣಿಯಡ್ಕ ಅವರು ಗಿಡನೆಟ್ಟು ಉದ್ಘಾಟಿಸಿದರು.
ಸ್ಥಳೀಯರಾದ ಕೃಷ್ಣ ಓಣಿಯಡ್ಕ, ಸುರೇಶ ನೀರ್ಚಾಲು ಸಹಕರಿಸಿದರು. ಎಕೆಪಿಎ ಬದಿಯಡ್ಕ ಯೂನಿಟ್ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ, ಕೋಶಾಧಿಕಾರಿ ಬಾಲಕೃಷ್ಣ ನಿಡುಗಳ, ಸದಸ್ಯರುಗಳಾದ ಉದಯ ಕಂಬಾರು, ಗೋಪಾಲಕೃಷ್ಣ ಆರೋಳಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಯೂನಿಟ್ ಸಭೆಯನ್ನು ನಡೆಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!