ನೋವ ನುಂಗಿ ನಗೋಕೆ ಸಜ್ಜಾದ ಕಾಶ್ಮೀರ: ಧೈರ್ಯ ಮಾಡಿ ಪಹಲ್ಗಾಮ್‌ಗೆ ಕಾಲಿಟ್ಟ ಪ್ರವಾಸಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಹಲ್ಗಾಮ್’ನತ್ತ ಇದೀಗ ಮತ್ತೆ ಪ್ರವಾಸಿಗರು ಮುಖ ಮಾಡಿದ್ದು, ಇದರಿಂದ ಭಯೋತ್ಪಾದನೆ ಮತ್ತು ಭಯದ ವಿರುದ್ಧ ಸ್ಥಿತಿಸ್ಥಾಪಕತ್ವವು ಜಯಗಳಿಸಿದಂತಾಗಿದೆ. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಟೂರಿಸ್ಟ್‌ಗಳ ಮೇಲೆ ಅಟ್ಯಾಕ್‌ ಮಾಡಿ ಕೊಂದಿದ್ದು, ಕರಾಳ ದಿನದಿಂದಾಗಿ ಜನ ಕಾಶ್ಮೀರ ನೋಡಲು ಭಯಪಟ್ಟಿದ್ದರು.

ಉಗ್ರರ ದಾಳಿಯಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವ ಅಪಾಯವಿದೆ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಾಶ್ಮೀರ ಪ್ರವಾಸ ಬುಕ್‌ ಮಾಡಿದ್ದವರು ರದ್ದು ಮಾಡುತ್ತಿದ್ದರು. ಆದರೀಗ ಪ್ರವಾಸೋದ್ಯಮ ತಜ್ಞರು ಲೆಕ್ಕಾಚಾರ ಉಲ್ಟಾ ಆಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.

ಶನಿವಾರ ಹಾಗೂ ಭಾನುವಾರ ಪಹಲ್ಗಾಮ್ ನಲ್ಲಿ ಗುಂಪು ಗುಂಪುಗಳಾಗಿ ಪ್ರವಾಸಿಗರು ಬಂದಿದ್ದು, ಲಿದರ್ ನದಿ ದಡದಲ್ಲಿರುವ ಸೆಲ್ಫಿ ಪಾಯಿಂಟ್‌ನಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು. ಪುಣೆಯ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರು. ಉಗ್ರರ ದಾಳಿಯ ಒಂದು ದಿನದ ನಂತರ ಏಪ್ರಿಲ್ 23 ರಂದು ಶ್ರೀನಗರಕ್ಕೆ ದಂಪತಿ ಆಗಮಿಸಿದ್ದಾರೆ.

ಕಾಶ್ಮೀರ ಭೂಮಿ ಮೇಲಿನ ಸ್ವರ್ಗ. ಜೀವನದಲ್ಲಿ ಅದನ್ನೊಮ್ಮೆ ನೋಡದೇ ಹೋದರೆ ನಮ್ಮದೇ ಲಾಸ್‌. ನಮ್ಮ ನೆಲಕ್ಕೆ ಹೋಗೋಕೆ ನಾವು ಭಯಪಡೋದು ಬೇಡ. ಗುಂಪಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಹೋಗಿ ಬರೋಣ ಎಂದು ಪ್ರವಾಸಿಗರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!