ಈ ಸಿನಿಮಾ ತಯಾರಿಗಾಗಿ 100 ಗಂಟೆ ನ್ಯೂಸ್ ನೋಡಿದ್ರಂತೆ ಕಟ್ರೀನಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾದಲ್ಲಿ ನಟನೆ ಮಾಡೋದು ಸುಲಭದ ಮಾತಲ್ಲ, ನಿರ್ದಿಷ್ಟ ಪಾತ್ರಕ್ಕೆ ಬೇಕಾದಂತೆ ತಮ್ಮನ್ನು ತಾವು ತಯಾರು ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ.

ಈ ಹಿಂದೆ ಪದ್ಮಾವತ್ ಸಿನಿಮಾದಲ್ಲಿ ರಣ್‌ವೀರ್ ನಟಿಸೋಕೆ ಒಂದು ತಿಂಗಳು ಒಂದೇ ರೂಂನಲ್ಲಿ ಕಾಲ ಕಳೆದು ತಯಾರಾಗಿದ್ದರಂತೆ. ಇದೇ ರೀತಿ ಕಟ್ರೀನಾ ಕೂಡ ಜಗ್ಗ ಜಾಸೂಸ್ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿಸೋಕೆ 100 ಗಂಟೆ ನ್ಯೂಸ್ ನೋಡಿದ್ದರಂತೆ.

ಜರ್ನಲಿಸ್ಟ್‌ಗಳು ಹೇಗೆ ಕೆಲಸ ಮಾಡ್ತಾರೆ, ಅವರ ದಿನಚರಿ ಹೇಗಿರುತ್ತದೆ, ಒಂದು ವಿಷಯವನ್ನು ಅವರು ಹೇಗೆ ಆರಿಸುತ್ತಾರೆ ಹೀಗೆ ಎಲ್ಲ ವಿಷಯಗಳ ಬಗ್ಗೆ ತಿಳಿಯೋಕೆ ಸಾಕಷ್ಟು ಯೂಟ್ಯೂಬ್ ನೊಡಿದ್ದರಂತೆ. ಕೆಲವು ಜರ್ನಲಿಸ್ಟ್‌ಗಳ ಜೊತೆಗೆ ಮಾತನಾಡಿ, ಪುಸ್ತಕಗಳನ್ನು ಓದಿ ತಯಾರಾಗಿದ್ದರಂತೆ ಕಟ್ರೀನಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!