ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣದ ಗಂಗೆ ಎಂದೇ ಕರೆಯಲಾಗುವ ಕಾವೇರಿ ಪವಿತ್ರ ಕಾವೇರಿ ತೀರ್ಥೋದ್ಭವ ಈ ಬಾರಿ ಅಕ್ಟೋಬರ್.17ರ ಕರಯರಾತ್ರಿ ಜರುಗಲಿದೆ.
ಅಕ್ಟೋಬರ್ 17 ರಂದು ಮಧ್ಯರಾತ್ರಿ 1.27 ಗಂಟೆಗೆ ಕರ್ಕಾಟಕ ಲಗ್ನದಲ್ಲಿ ಕಾವೇರಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಭಕ್ತರಿಗೆ ಕಾಣಿಸಿಕೊಳ್ಳಲಿರುವುದಾಗಿ ಹೇಳಲಾಗಿದೆ.
ಸೆ.27 ರಂದು ಬೆಳಗ್ಗೆ 9.29 ಗಂಟೆಗೆ ಭಾಗಮಂಡಲದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ತಲಕಾವೇರಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಅ.5 ರಂದು ಗುರವಾರ ಬೆಳಗ್ಗೆ 8.31 ಗಂಟೆಗೆ ಆಜ್ಞಾಮುಹೂರ್ತ, ಅ.15 ರಂದು ಸಂಜೆ 4.05 ಗಂಟೆಗೆ ಕಾಣಿಕೆ ಡಬ್ಬಿ ಇಡುವ ಧಾರ್ಮಿಕ ಕಾರ್ಯಗಳು ನಡೆಯಲಿರುವುದಾಗಿ ಶ್ರೀ ಭಾಗಮಂಡಲ, ತಲಕಾವೇರಿ ದೇವಾಲಯ ಸಮಿತಿ ಪ್ರಕಟಿಸಿದೆ.