June 15, 2026
Monday, June 15, 2026
spot_img

ಮಕ್ಕಳು ಆದಷ್ಟು ಕಣ್ಣಮುಂದೆಯೇ ಇರಲಿ! ಸಂಪ್‌ಗೆ ಬಿದ್ದು ಮೂರು ವರ್ಷದ ಮಗು ಸಾ*ವು, ಪೋಷಕರ ಆಕ್ರಂದನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೋಲಾರದಲ್ಲಿ ಮನೆಯ ಮುಂದೆಯೇ ಆಟವಾಡುತ್ತಿದ್ದ ಮಗುವೊಂದು ಸಂಪ್‌ಗೆ ಬಿದ್ದು ಮೃತಪಟ್ಟಿದೆ.

ಮಕ್ಕಳನ್ನು ಆದಷ್ಟು ಕಣ್ಣಮುಂದೆಯೇ ಇಟ್ಟುಕೊಳ್ಳುವುದು ವಾಸಿ ಎಂದು ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ. ಕಾರಂಜಿಕಟ್ಟೆ ಬಡಾವಣೆಯ ನಿವಾಸಿಗಳಾದ ವಿಕಾಸ್‌ ಹಾಗೂ ಹಂಸ ದಂಪತಿಯ ಮೂರು ವರ್ಷದ ಮಗು ಯಶಸ್‌ ಮೃತಪಟ್ಟಿದೆ.

ಆಟ ಆಡುತ್ತಾ ನೀರಿಗೆ ಬಿದ್ದ ಮಗುವನ್ನು ತಕ್ಷಣ ಹೊರಕ್ಕೆ ತೆಗೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಮಗು ಮೃತಪಟ್ಟಿದೆ. ಮೂರು ವರ್ಷದಿಂದ ಮುದ್ದು ಮಾಡಿ ಬೆಳೆಸಿದ್ದ ಕಂದಮ್ಮ ಇನ್ನು ನೆನಪು ಮಾತ್ರ ಎನ್ನುವ ವಿಷಯವನ್ನು ಪೋಷಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಗಲ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !