ರಾಜಕೀಯದಿಂದ ನನ್ನನ್ನು ದೂರ ಇಡಿ,ನನ್ನ ಹೆಸರು ಉಲ್ಲೇಖ ಆಗೋದು ಇಷ್ಟ ಇಲ್ಲ: ಸಮಂತಾ ಖಡಕ್‌ ರಿಯಾಕ್ಷನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತೆಲಂಗಾಣ ಸಚಿವೆ ಕೊಂಡ ಸುರೇಖಾ ಅವರು ಬಾಯಿ ಹರಿಬಿಟ್ಟಿದ್ದಾರೆ. ಬಿಆರ್​ಎಸ್​ ಅಧ್ಯಕ್ಷ ಕೆಟಿ ರಾಮ್ ರಾವ್ ಅವರು ಸಮಂತಾನ ತಮ್ಮ ಬಳಿ ಕಳಿಸೋಕೆ ಅಕ್ಕಿನೇನಿ ನಾಗಾರ್ಜುನ ಬಳಿ ಹೇಳಿದ್ದರು ಎಂದು ಸುರೇಖಾ ಹೇಳಿಕೆ ನೀಡಿದ್ದರು.

ನಾಗಾರ್ಜುನ ಕೂಡ ಸಮಂತಾನ ಕಳಿಸೋಕೆ ರೆಡಿ ಆಗಿದ್ದರು ಎಂದು ಸುರೇಖಾ ಹೇಳಿದ್ದರು. ಈ ಹೇಳಿಕೆ ವಿರುದ್ಧ ಎಲ್ಲರೂ ಸಿಡಿದೆದ್ದಿದ್ದಾರೆ. ಅವರ ಬಳಿ ಕ್ಷಮೆಗೆ ಆಗ್ರಹಿಸುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೆಟಿ ರಾಮ್ ರಾವ್ ಅವರಿಂದ ಸಮಂತಾ ವಿಚ್ಛೇದನ ಆಯಿತು. ಆ ಸಮಯದಲ್ಲಿ ಕೆಟಿ ರಾಮ್ ರಾವ್ ಸಚಿವರಾಗಿದ್ದರು. ಅವರು ನಟಿಯರ ಫೋನ್ ಟ್ಯಾಪ್ ಮಾಡಿ ಅವರ ವೀಕ್​ನೆಸ್ ಕಂಡುಹಿಡಿದುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು. ಅವರನ್ನು ಡ್ರಗ್ ಅಡಿಕ್ಟ್ ಆಗುವಂತೆ ಮಾಡುತ್ತಿದ್ದರು ಎಂದಿದ್ದರು. ಇದರ ಜೊತೆಗೆ ಸಮಂತಾ ವಿಚ್ಛೇದನದ ಬಗ್ಗೆ ಕಟ್ಟುಕಥೆ ಹೇಳಿದ್ದರು.

ಮಹಿಳೆಯಾಗಿ ಬಣ್ಣದ ಲೋಕದಲ್ಲಿ ಬದುಕುಳಿಯಲು ಬಹಳಷ್ಟು ಧೈರ್ಯ ಮತ್ತು ಶಕ್ತಿ ಬೇಕು. ಕೊಂಡಾ ಸುರೇಖಾ ಅವರೇ ಈ ಪ್ರಯಾಣ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದ ಬಗ್ಗೆ ಖುಷಿ ಇದೆ. ಅದನ್ನು ಕ್ಷುಲ್ಲಕಗೊಳಿಸಬೇಡಿ. ಸಚಿವರಾಗಿ ನಿಮ್ಮ ಮಾತುಗಳು ಗಮನಾರ್ಹವಾದ ತೂಕವನ್ನು ಹೊಂದಿವೆ ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಖಾಸಗಿತನಕ್ಕೆ ಗೌರವ ನೀಡಿ ಎಂದು ಕೋರಿದ್ದಾರೆ ಸಮಂತಾ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!