ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಕೀರ್ತಿ ಸುರೇಶ್ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಕೀರ್ತಿ ಗೋವಾದಲ್ಲಿ ಮದುವೆಯಾಗಲಿದ್ದಾರೆ.
ಕೀರ್ತಿ ಸುರೇಶ್ ತಮ್ಮ ಬಾಲ್ಯದ ಗೆಳೆಯ ಆಂಟೊನಿ ತಟ್ಟಿಲ್ ಅವರನ್ನು ವಿವಾಹವಾಗಲಿದ್ದಾರೆ. ಆಂಟೊನಿ ಹಾಗೂ ಕೀರ್ತಿ ಸುರೇಶ್ ಸಹಪಾಠಿಗಳಾಗಿದ್ದು, ಒಟ್ಟಿಗೆ ಹೈಸ್ಕೂಲ್ ಶಿಕ್ಷಣವನ್ನು ಮಾಡಿದವರು. ಆಗಿನಿಂದಲೂ ಇವರು ಪ್ರೀತಿಯಲ್ಲಿದ್ದರಂತೆ. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗುತ್ತಿದ್ದಾರೆ. ಈ ಜೋಡಿಯ ವಿವಾಹ ಡಿಸೆಂಬರ್ 11-12 ರಂದು ಗೋವಾನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಕುಟುಂಬಸ್ಥರು ಮತ್ತು ಕೆಲವೇ ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿ ವಿವಾಹವಾಗಲಿದೆ. ಆ ನಂತರ ಕೊಚ್ಚಿ ಹಾಗೂ ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಯನ್ನು ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಆಂಟೊನಿ ತಟ್ಟಿಲ್ ಕೊಚ್ಚಿಯವರಾಗಿದ್ದು, ದುಬೈನಲ್ಲಿ ನೆಲೆಗೊಂಡಿದ್ದಾರೆ. ದುಬೈನಲ್ಲಿ ಕೆಲ ಉದ್ಯಮಗಳನ್ನು ಆಂಟೊನಿ ಹೊಂದಿದ್ದು ಇದೀಗ ಆಂಟೊನಿ ಹಾಗೂ ಕೀರ್ತಿ ವಿವಾಹವಾಗಲಿದ್ದಾರೆ. ಈ ಹಿಂದೆ ಕೀರ್ತಿ ಹೆಸರು ರಿಯಲ್ ಎಸ್ಟೇಟ್ ಉದ್ಯಮಿ ಫರ್ಹಾನ್ ಬಿನ್ ಲಿಖತ್ ಜೊತೆಗೆ ಕೇಳಿ ಬಂದಿತ್ತು. ಫರ್ಹಾನ್ ಅನ್ನು ಕೀರ್ತಿ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಫರ್ಹಾನ್, ಕೀರ್ತಿ ಜೊತೆಗೆ ರೀಲ್ ಒಂದನ್ನು ಸಹ ಶೇರ್ ಮಾಡಿದ್ದರು.