ಚಳಿಗಾಲದ ತ್ವಚೆಯ ಆರೈಕೆಯು ದುಬಾರಿ ಕ್ರೀಮ್‌ಗಳನ್ನು ಒಳಗೊಂಡಿರಬೇಕಾಗಿಲ್ಲ. ನಿಮಗೆ ಬೇಕಾಗಿರುವುದು ನಿಮ್ಮ ಅಡುಗೆಮನೆಯಲ್ಲಿ ನೀವು ಪ್ರತಿದಿನ ಬಳಸುವ ಕೆಲವು ವಸ್ತುಗಳು. ಅವುಗಳಲ್ಲಿ ಬೆಣ್ಣೆ ಕೂಡ ಒಂದು.
ಇದು ಚರ್ಮವನ್ನು ರಕ್ಷಿಸುವಲ್ಲಿ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ತುಟಿಗಳು ಒಡೆದು, ಒಣಗಿದ್ದರೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಬೆಣ್ಣೆಯನ್ನು ಹಚ್ಚಿ.
ಚಳಿಗಾಲದಲ್ಲಿ ನಿಮ್ಮ ಹಿಮ್ಮಡಿಗಳು ಬಿರುಕು ಬಿಟ್ಟರೆ, ಮಲಗುವ ಮುನ್ನ ಬೆಣ್ಣೆಯನ್ನು ಹಚ್ಚಿ ಮತ್ತು ಪ್ಲಾಸ್ಟಿಕ್ ನಿಂದ ಪಾದಗಳನ್ನು ಕವರ್ ಮಾಡಿ. ಬೆಳಗ್ಗೆ ಎದ್ದು ಆ ಕವರ್ ಅನ್ನು ತೆಗೆದು ಬಟ್ಟೆಯಿಂದ ಸ್ವಚ್ಛಗೊಳಿಸಿ, ಇದರಿಂದ ಕಾಲು ಒಡೆದ ಸಮಸ್ಯೆ ಮತ್ತು ಅದಕ್ಕೆ ಸಂಬಂಧಿಸಿದ ನೋವು ನಿವಾರಣೆಯಾಗುತ್ತದೆ.
ನಿಮ್ಮ ತ್ವಚೆ ಒಣಗಿದ್ದರೆ, ಬಿರುಕು ಬಿಟ್ಟಿದ್ದರೆ ಅರ್ಧ ಚಮಚ ಬೆಣ್ಣೆಯನ್ನು ಅಂಗೈಯಲ್ಲಿ ಹಾಕಿ ಚೆನ್ನಾಗಿ ತಿಕ್ಕಿ. ಅದನ್ನು ಹಚ್ಚಿ ನಯವಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ತ್ವಚೆ ಸಮಸ್ಯೆ ಬಹುತೇಕ ದೂರವಾಗುತ್ತದೆ.